ಲಯನ್ಸ್ ಕ್ಲಬ್ ಪಂಜ, ಆರೋಗ್ಯ ಇಲಾಖೆ ಸುಳ್ಯ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕ್ಷಯರೋಗ ಪತ್ತೆ ಆಂದೋಲನದ ಉದ್ಘಾಟನಾ ಕಾರ್ಯಕ್ರಮ ಮತ್ತು ”ಹೆಜ್ಜೆ ಬದಲಾದಾಗ” ಕಿರುಚಿತ್ರ ವೀಕ್ಷಣೆ ಕಾರ್ಯಕ್ರಮ ಸೆ. 24 ರಂದು ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ. ರಾಮಕೃಷ್ಣ ರಾವ್, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಭಾಗವಹಿಸಿದ್ದರು.
ಗೌರವ ಅತಿಥಿಗಳಾಗಿ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಪಂಜ ಪಂಚಶ್ರೀ ಜೇಸಿಐ ಕಾರ್ಯದರ್ಶಿ ಲೋಕೇಶ್ ಆಕ್ರಿಕಟ್ಟೆ , ಬೆಳ್ಳಾರೆ ಜೇಸಿಐ ಅಧ್ಯಕ್ಷ ಪದ್ಮನಾಭ ಕಲಾಸುಮ, ಕ್ಷಯ ಚಿಕಿತ್ಸಾ ಘಟಕದ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪಂಜ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜೇಶ್ ರೈ, ಖಜಾಂಜಿ ಬಾಲಿಶ್ ಪಳಂಗಾಯ ಉಪಸ್ಥಿತರಿದ್ದರು.
ಲ। ಬಾಲಕೃಷ್ಣ ಕುದ್ವ ವೇದಿಕೆಗೆ ಆಹ್ವಾನಿಸಿದರು.
ಲಯನ್ ಪ್ರಾರ್ಥನೆಯನ್ನು ಲ।ಕರುಣಾಕರ ಎಣ್ಣೆಮಜಲು ನೆರವೇರಿಸಿದರು. ಜೇಸಿ ಲೋಕೇಶ್ ಅಕ್ರಿಕಟ್ಟೆ ವಂದಿಸಿದರು.