
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಗುತ್ತಿಗಾರು ಗ್ರಾಮ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಯ ಪರೀಕ್ಷೆಯಲ್ಲಿ 625/625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ನಮ್ಮ ಊರಿಗೆ ಕೀರ್ತಿ ತಂದ ಮಣಿಯಾನಮನೆ ವೇದಾವತಿ ದುರ್ಗೆಶ್ ರವರ ಸುಪುತ್ರಿ ಅನನ್ಯ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಊರಿನ ಹಿರಿಯರಾದ ಬಿ ನಾಗಪ್ಪ ಗೌಡ ಬೊಮ್ಮದೆರೆ – ಪೈಕ ಮತ್ತು ಶ್ರೀಮತಿ ಗಿರಿಜಾ ವಾಸುದೇವ ಪೈಕ ಮನೆ ಇವರು ಶಾಲು ಹೊದಿಸಿ ಹಾರ ಹಾಕಿ ತಾಂಬೂಲ ಫಲಪುಷ್ಪ ನೀಡಿ ಗೌರವಿಸಿದರು.
ಗ್ರಾಮ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಮತ್ತು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹೆಚ್ ಬಿ ಕೇಶವ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಪದ್ಮನಾಭ ದಂಬೆಕೊಡಿ, ಪಿ ಎಸ್ ಜಗದೀಶ್ ಪೈಕ, ಸೋಮಶೇಖರ ಮಾವಜಿ, ಲೋಕೇಶ್ವರ ಡಿ.ಆರ್., ಮಣಿಯಾನ ತರವಾಡು ಮನೆಯ ಯಂ ಹರಿಶ್ಚಂದ್ರ, ಶುಭಕರ ಅಂಜೆರಿ, ಶ್ರೀಮತಿ ಕವಿತಾ, ಕು. ಅಮೂಲ್ಯ, ಆದಿತ್ಯ ಮತ್ತು ಮನೆಯ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಸಮಿತಿಯ ಪ್ರದಾನ ಕಾರ್ಯದರ್ಶಿ ಮಾಧವ ಮೂಕಮಲೆ ಸ್ವಾಗತಿಸಿ ಪ್ರಾಸ್ತಾಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ ವಂದಿಸಿದರು.