


ಯುವಜನ ಸಂಯುಕ್ತ ಮಂಡಳಿಯ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.18ರಂದು ಮಂಡಳಿ ಅಧ್ಯಕ್ಷ ಅನಿಲ್ ಪೂಜಾರಿಮನೆ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದಿಲೀಪ್ ಬಾಬ್ಲುಬೆಟ್ಟು, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ಕೆ.ಎಸ್. ಉಪಸ್ಥಿತರಿದ್ದರು. ಕೊರೊನಾ ವಾರಿಯರ್ ಆಗಿ ಪಾರದರ್ಶಕ ಸೇವೆಗಾಗಿ ಮಂಡಳಿಯ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು ರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2021-22 ನೇ ಸಾಲಿನ ಅಧ್ಯಕ್ಷರಾಗಿ ದಯಾನಂದ ಕೇರ್ಪಳ, ಕಾರ್ಯದರ್ಶಿಯಾಗಿ ಸತೀಶ್ ಮೂಕಮಲೆ, ಕೋಶಾಧಿಕಾರಿಯಾಗಿ ವಿಜಯಕುಮಾರ್ ಉಬರಡ್ಕ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆರ್ ಕೆ ಮಹಮ್ಮದ್, ತೇಜಸ್ವಿ ಕಡಪಳ, ಜತೆ ಕಾರ್ಯದರ್ಶಿ ಸಂಜಯ್ ನೆಟ್ಟಾರು, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾರಾಣಿ ಮುಳ್ಯ, ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ, ನಿರ್ದೇಶಕರಾಗಿ ರಾಜೀವಿ ಲಾವಂತಡ್ಕ, ಪ್ರವೀಣ್ ಜಯನಗರ, ವಿನುತಾ ಪಾತಿಕಲ್ಲು, ಚರಣ್ ಕಾಯರ, ತುಳಸಿ ಕೇವಳ, ದಯಾನಂದ ಪಾತಿಕಲ್ಲು,ಕಾರ್ತಿಕ್ ರೈ, ಮುರಳಿ ನಳಿಯಾರು, ಜನಾರ್ದನ ನಾಗತೀರ್ಥ, ನಮಿತ ಬಿ.ವಿ., ಚಂದ್ರಕಲಾ ಐನೆಕಿದು,ಪ್ರತಿಭಾ ಕಾಯರ ಗೌರವ ಸಲಹೆಗಾರರಾಗಿ ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್ಲು, ಶಿವಪ್ರಕಾಶ್ ಅಡ್ಡನಪಾರೆ, ದೀಪಕ್ ಕುತ್ತಮೊಟ್ಟೆ, ದಿಲೀಪ್ ಬಾಬ್ಲುಬೆಟ್ಟು, ಶಂಕರ ಪೆರಾಜೆ, ಚಂದ್ರಶೇಖರ ಪನ್ನೆ, ಲಕ್ಷ್ಮೀನಾರಾಯಣ ಕಜೆಗದ್ದೆ ಆಯ್ಕೆಯಾದರು. ತೇಜಸ್ವಿ ಕಡಪಳ ಸ್ವಾಗತಿಸಿ, ಸತೀಶ್ ಮೂಕಮಲೆ ವಂದಿಸಿದರು. ದಯಾನಂದ ಕೇರ್ಪಳ ಹಾಗೂ ಆರ್.ಕೆ.ಮಹಮ್ಮದ್ ನಿರೂಪಿಸಿದರು.