



ಮಿತ್ರ ಮಂಡಲ ನಾಗತೀರ್ಥ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೆ. 18 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ನಿತಿನ್ ಕುಮಾರ್ ನಾಗತೀರ್ಥ ಕಾರ್ಯದರ್ಶಿಯಾಗಿ ನವೀನ್ ನಾಗತೀರ್ಥ, ಕೋಶಾಧಿಕಾರಿಯಾಗಿ ಯತೀಶ್ ನಾಗತೀರ್ಥ, ಕ್ರೀಡಾ ಕಾರ್ಯದರ್ಶಿ ಹರ್ಷಿತ್ ಸಂಪ ಆಯ್ಕೆಯಾಗಿದ್ದರು.
ನೂತನ ಪದಾಧಿಕಾರಿಗಳಿಗೆ ಯುವ ಜನ ಸಂಯುಕ್ತ ಮಂಡಳಿ ಸುಳ್ಯ ಇದರ ಗೌರವ ಸಲಹೆಗಾರ ದಿಲೀಪ್ ಬಾಬ್ಲುಬೆಟ್ಟು ಪ್ರಮಾಣ ವಚನ ಬೋಧಿಸಿದರು .
ಯುವಜನ ಸಂಯುಕ್ತ ಮಂಡಳಿ ಇದರ ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ ,ಉಳ್ಳಾಕುಲು ಕಲಾರಂಗ ಇದರ ಗೌರವಾಧ್ಯಕ್ಷ ಸಂದೀಪ್ ಪಲ್ಲೋಡಿ ,ಮಿತ್ರ ಮಂಡಲ ನಾಗತೀರ್ಥ ಇದರ ಗೌರವಾಧ್ಯಕ್ಷ ರಾಜೇಶ್ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ನಾಗತೀರ್ಥ ಸ್ವಾಗತಿಸಿ, ಯತೀಶ್ ನಾಗತೀರ್ಥ ವಂದಿಸಿದರು. ಜನಾರ್ಧನ ನಾಗತೀರ್ಥ ನಿರೂಪಿಸಿದರು.