Ad Widget

ಗೂನಡ್ಕ : ಮ್ಯಾಕೊ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು ಆಟೋರಿಕ್ಷಾ ಹಾಗೂ ಕಾರು ಚಾಲಕರ ಸಹಕಾರಿ ಸಂಘ ನಿಯಮಿತ (MACO) ಇದರ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕರು ಹಾಗೂ ಸಂಘದ ಅಧ್ಯಕ್ಷರಾದ ಐವನ್ ಡಿ’ಸೋಜಾರವರು ಇಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಚಾಲನೆಯನ್ನು ನೀಡಿದರು.
ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆ, ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಜಗದೀಶ್ ರೈ, ಸುಂದರಿ ಮುಂಡಡ್ಕ, ತೊಡಿಕಾನ ಗ್ರಾಮ ಪಂಚಾಯತ್ ಸದಸ್ಯರುಗಳಾದ ರವೀಂದ್ರ ಪೂಜಾರಿ,ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು, ಶಶಿಧರ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಮಲಾ ಪ್ರಸಾದ್, ಸುಶೀಲ ನಾಯ್ಕ್, ಅನುಪಮಾ, ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಿಮ್ಮಯ್ಯ ಗೌಡ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಎಚ್.ಎ.ಹಮೀದ್ ಸಂಪಾಜೆ, ಮ್ಯಾಕೋ ಸೊಸೈಟಿಯ ನಿರ್ದೇಶಕರುಗಳಾದ ಸಿರಿಲ್ ಡಿ’ಸೋಜಾ, ವಸಂತ ಶೆಟ್ಟಿ, ದಿನೇಶ್, ಸಂಪಾಜೆ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಬಾಲಚಂದ್ರ, ಪ್ರಮುಖರಾದ ಎ.ಕೆ.ಇಬ್ರಾಹಿಂ ಕಲ್ಲುಗುಂಡಿ, ಚಿದಾನಂದ ಮಾಸ್ತರ್, ಜಿ.ಜಿ.ನವೀನ್ ಕುಮಾರ್, ರಾಜು ನೆಲ್ಲಿಕುಮೇರಿ, ಶ್ರೀಧರ್, ಪ್ರಸಾದ್, ಉಮ್ಮರ್ ದರ್ಖಾಸ್, ವಿನಯ್ ಕುಮಾರ್, ಶರ್ಫುದ್ದೀನ್ ಅರಂತೋಡು, ವೆಂಕಪ್ಪ ಗೌಡ, ಪಾಂಡಿ ಮಹಮ್ಮದ್ ಕುಂಞ, ಸಿಲ್ವಸ್ಟರ್ ಡಿ’ಸೋಜಾ, ಕುಂಞಕಣ್ಣ, ಸೆಬಾಸ್ಟಿಯನ್, ಜಿ.ಜಿ.ಶಿವಪ್ರಸಾದ್, ನಾರಾಯಣ ಗೌಡ ಪೆರುಂಗೋಡಿ, ಸುಜಿತ್ ಪೇರಡ್ಕ ಎಸ್.ಎಂ.ಅಬ್ದುಲ್ಲ ಗೂನಡ್ಕ, ಪೆಲ್ತಡ್ಕ ಮಹಮ್ಮದ್ ಕುಂಞ, ಡಿ.ಎಂ.ಅಬ್ದುಲ್ಲ, ರವಿಚಂದ್ರ, ಪ್ರವೀಣ್ ಕುಮಾರ್, ಪಳನಿ ಪೆಲ್ತಡ್ಕ, ಶಿಹಾಬುದ್ದೀನ್ ಕೊಪ್ಪದಕಜೆ ಸೇರಿದಂತೆ ಇನ್ನೀತರರು ಈ ವೇಳೆ ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರು ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading