ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನೀಲಂ ಅಧ್ಯಕ್ಷತೆಯಲ್ಲಿ ಸೆ.18 ರಂದು ಸಂಘದ 3ನೇ ಮಹಡಿಯಲ್ಲಿ ನಡೆಯಿತು.
ಸಂಘವು 2020-21 ನೇ ವರ್ಷದ ಅವಧಿಯಲ್ಲಿ ಲಾಭಗಳಿಸಿದ್ದನ್ನು ಪರಿಗಣಿಸಿ, ತನ್ನ ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡುವುದೆಂದು ಅಧ್ಯಕ್ಷರು ಘೋಷಿಸಿದರು. 2020-21 ನೇ ವರ್ಷದ ಆಡಳಿತ ಮಂಡಳಿ ವರದಿಯನ್ನು ಶ್ರೀಮತಿ ಸುನಿತಾ ಡಿ.ಸೋಜ ಅವರು ವಾಚಿಸಿದರು. ಲೆಕ್ಕಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್.ಪಿ.ಜಿ ಮಂಡಿಸಿದರು. ಉಪಾಧ್ಯಕ್ಷ ಜೋನ್ ವಿಲಿಯಂ ಲಸಾದ್ರೋ ಹಾಗೂ ಅಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಬಿಟ್ಟಿ ಬಿ. ನೆಡುನಿಲಂ ಸ್ವಾಗತಿಸಿ, ನಿರ್ದೇಶಕ ಡೇವಿಡ್ ಧೀರಾ ಕ್ರಾಸ್ತಾ ವಂದಿಸಿದರು.
- Saturday
- November 23rd, 2024