Ad Widget

ಮೋದಿ ಜನ್ಮದಿನದ ಅಂಗವಾಗಿ ಬೂಡು ಭಗವತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಸುಳ್ಯ ಕೇರ್ಪಳ ಬೂಡು ಶ್ರೀ ಪನ್ನೆಬೀಡು ಭಗವತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆಯನ್ನು ಬೂಡು ರಾಧಾಕೃಷ್ಣ ರೈ ನೆರೆವೇರಿಸಿದರು. ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ, ಸುಳ್ಯ ನಗರ ಬಿಜೆಪಿ ನಗರ ಅಧ್ಯಕ್ಷ ಐ.ಬಿ. ಚಂದ್ರಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಸುಪ್ರೀತ್ ಮೋಂಟಡ್ಕ, ಸಂಜೀವ ಟೈಲರ್, ಚಂದ್ರಶೇಖರ್ ಪೂಜಾರಿ, ಪ್ರದೀಪ್ ರೈ ಬೂಡು, ಗುರುಸ್ವಾಮಿ ಬಿ.ಜಿ. ಬೀರಮಂಗಲ ಹಾಗೂ ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!