ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಉಳುವಾರಿನ ಮಹಿಳೆಯ ಮೃತದೇಹ ಪೆರಾಜೆ ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.
ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ನಾಪತ್ತೆಯಾಗಿದ್ದರು. ತೊಡಿಕಾನ ಅರಂತೋಡಿನ ಗ್ರಾಮಸ್ಥರು, ಅಗ್ನಿಶಾಮಕ ದಳ, ಪೈಚಾರಿನ ಮುಳುಗು ತಜ್ಞರು ರಾತ್ರಿ ಹಗಲು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಪೆರಾಜೆ ಕಲ್ಚರ್ಪೆ ಸಮೀಪ ಪತ್ತೆಯಾಗಿದೆ.
- Thursday
- November 21st, 2024