
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಕುಮಾರಿ ಅನನ್ಯ ಎಂ ಡಿ ರವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ ಅಮೈ, ನಿಕಟ ಪೂರ್ವಾಧ್ಯಕ್ಷ ಉಮೇಶ್ ಕೆ ಎನ್, ಮಾಯಿಲಪ್ಪ ಸಂಕೇಶ, ಸದಸ್ಯರಾದ ರವಿ ಕಕ್ಕೆಪದವು, ನಾಗರಾಜ ಪರಮಲೆ, ಚಂದ್ರಶೇಖರ ನಾಯರ್ ಕಾರ್ಯದರ್ಶಿ ಶಿವರಾಮ ಏನೆಕಲ್ ಉಪಸ್ಥಿತರಿದ್ದರು.