
ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ 18 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಬೆಳಿಗ್ಗೆ 9.00 ಗಂಟೆಗೆ ಗಣಪತಿ ಪ್ರತಿಷ್ಠೆ ಯೊಂದಿಗೆ ಪ್ರಾರಂಭಗೊಂಡಿತು. ಕೊವಿಡ್19ರ ಕಾರಣ ಯಾವುದೇ ಸ್ಪರ್ಧಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ಸರಳವಾಗಿ ಆಚರಿಸಲಾಯಿತು. ಭಜನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸಲಾಗಿದೆ.ನಾಳೆಯ ದಿನ ಸಂಜೆ 5.00 ಗಂಟೆಗೆ ಶ್ರೀ ಗಣಪತಿ ದೇವರ ಜಲಸ್ಥಂಭನವು ಶಂಖತೀರ್ಥ ನದಿಯಲ್ಲಿ ನಡೆಯಲಿದೆ.