Ad Widget

ಸರಸ್ವತಿ ಕಾಮತ್ ಮೇಲೆ ಹಲ್ಲೆ ಪ್ರಕರಣ- ಹರೀಶ್ ಕಂಜಿಪಿಲಿ ಮತ್ತು ತಂಡಕ್ಕೆ ಶಿಕ್ಷೆ ನಿಗದಿಪಡಿಸಿ ಆದೇಶ

ಸುಳ್ಯ: 2014 ರ ಲೋಕಸಭಾ ಚುನಾವಣೆಯ ಸಂದರ್ಭ ಹರೀಶ್ ಕಂಜಿಪಿಲಿ ಮತ್ತು ತಂಡದವರು  ಅಂದಿನ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಸರಸ್ವತಿ ಕಾಮತ್ ಅವರ ಮೇಲೆ ಮಾಡಿದ್ದಾರೆನ್ನಲಾದ  ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.೬ ರಂದು ಸುಳ್ಯ ನ್ಯಾಯಾಲಯದಲ್ಲಿ ತೀರ್ಪು ಹೊರಬಂದಿದ್ದು ಹರೀಶ್ ಕಂಜಿಪಿಲಿ ಮತ್ತವರ ತಂಡಕ್ಕೆ ಶಿಕ್ಷೆ ನಿಗದಿಯಾಗಿದೆ.

. . . . . . . . .

ಘಟನೆಯ ಹಿನ್ನಲೆ: 2014 ರ ಲೋಕಸಭಾ  ಚುನಾವಣೆಯ ಸಂದರ್ಭ  ಸರಸ್ವತಿ ಕಾಮತ್ ಅವರು ನೆಲ್ಲೂರು ಕೇಮ್ರಾಜೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಂದರ್ಭ ಹರೀಶ್ ಕಂಜಿಪೀಲಿ ಮತ್ತು ಇತರ ೧೪ ಜನರ  ಗುಂಪು ಸರಸ್ವತಿ ಕಾಮತ್ ಅವರ ಮೇಲೆ ಹಲ್ಲೆ ಮತ್ತು ಮಾನಭಂಗ ಮಾಡಿದ್ದರು ಎಂದು ಆರೋಪಿಸಿ ಸರಸ್ವತಿ ಕಾಮತ್ ಅವರು  ಸುಳ್ಯ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದರು.

. . . . . . .

*2 ವರ್ಷ ಜೈಲು ಶಿಕ್ಷೆ ಹಾಗೂ  1. 12 ಲಕ್ಷ ದಂಡ*
ಸುಳ್ಯ ಜೆ ಎಂ ಎಫ್ ಸಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ. ಅವರು ಆರೋಪಿಗಳಿಗೆ ಸೆ. 149  ,147\149, 341,506 , 504, 323,354 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ಸಾಬೀತಾಗಿದ್ದು ಇದೆಲ್ಲವನ್ನೂ ಸಂಕ್ಷಿಪ್ತಗೊಳಿಸಿ ೨ ವರ್ಷಗಳಿಗೆ ಜೈಲು ಶಿಕ್ಷೆಯಯನ್ನು ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಪ್ರಕರಣ ಸಂಬಂಧ ಹರೀಶ್ ಕಂಜಿಪಿಲಿ ಅವರು ಪ್ರತಿಕ್ರಿಯಿಸಿದ್ದು ಈ ಬಗ್ಗೆ ನಮಗೆ ಅಧಿಕೃತ ಆದೇಶ ಪ್ರತಿ ದೊರೆತ ಬಳಿಕ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading