ಅಮರ ಮುಡ್ನೂರು ಗ್ರಾಮದ ಚಾಮಡ್ಕ ಫಾಲ್ಸ್ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಇದೀಗ ಅಲ್ಲಿ ಅಪಾಯದ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
ನೀರಿನ ಹರಿವಿನಿಂದಾಗಿ ಕಲ್ಲುಗಳ ಪಾಚಿಕಟ್ಟಿದ್ದು ಹೆಚ್ಚಿನ ಯುವಕ – ಯುವತಿಯರು ಇತ್ತೀಚಿಗೆ ಈ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೋಜಿಗೆ ಬಿದ್ದು ಪಾಚಿಗಟ್ಟಿದ ಕಲ್ಲುಗಳ ಮೇಲೆ ಓಡಾಡುತ್ತಿದ್ದಾರೆ.
ಪ್ರವಾಸಿಗರಿಗೆ ಜಲಪಾತದ ಸೌಂದರ್ಯ ವೀಕ್ಷಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದರೂ ಜನರು ಅದರ ಸದುಪಯೋಗಪಡಿಸಿಕೊಳ್ಳದೇ ಅಪಾಯವನ್ನು ಮೈಗೆಳೆದುಕೊಳ್ಳುವಂತೆ ಭಾಸವಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಸೂಚನ ಫಲಕ ಅಳವಡಿಸಿ ಅವಘಡಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.