‘ಬದುಕಿದರೆ ಹೀಗೆ ಬದುಕಬೇಕಲ್ಲವೇ?’ ಎಂಬಂತೆ ಸದ್ದಿಲ್ಲದೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯ ಕೆಲಸವನ್ನು ಇಲ್ಲೋರ್ವ ಹಿರಿಯ ವ್ಯಕ್ತಿ ಮಾಡುತ್ತಿದ್ದಾರೆ. ಕಳಂಜ ಗ್ರಾಮದ ಎ.ಬಿ. ಮೊೖದ್ದಿನ್ ಎಂಬವರೇ ಈ ರೀತಿಯಾದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರು.
ಇವರು ಹಲವಾರು ವರ್ಷಗಳಿಂದ ವಿದೇಶದಲ್ಲಿ ಕೆಲಸದಲ್ಲಿ ಇದ್ದು ಈಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಹಾಯಾಗಿ ಇರದೇ ತನ್ನದೇ ಆದ ವಿಶಿಷ್ಟ ಸೇವೆಯನ್ನು ಊರಿಗೆ ಮಾಡುತ್ತಿರುವ ಇವರು ನಿಜಕ್ಕೂ ಮಾದರಿಯೇ ಸರಿ.
ಕಳಂಜ ಗ್ರಾಮದ ಚೊಕ್ಕಾಡಿ ಕ್ರಾಸ್ ಬಳಿ ಗಿಡ ಗುಂಟೆಗಳು ಬೆಳೆದು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು,
ಇದನ್ನು ಗಮನಿಸಿದ ಎ.ಬಿ. ಮೊೖದ್ದಿನ್ ಈ ಇಳಿವಯಸ್ಸಿನಲ್ಲೂ ಆ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ತನಗೆ ಊರಿನ ಮೇಲೆ ಇರುವ ಪ್ರೀತಿಯನ್ನು ತೋರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಊರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.