ಗುತ್ತಿಗಾರು ಗ್ರಾಮದ ವಳಲಂಬೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆಯು ಸೆ.02 ರಂದು ನಡೆಯಿತು.
ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರವೀಶ್ ಕುಮಾರ್ ಮೊಟ್ಟೆಮನೆ, ಉಪಾಧ್ಯಕ್ಷರಾಗಿ ಅಭಿಲಾಷಾ.ಎಸ್.ಎಂ ಮೋಟ್ನೂರು ಆಯ್ಕೆಯಾದರು.
ಸದಸ್ಯರುಗಳಾಗಿ ಸತ್ಯವತಿ.ವಿ, ಯುವರಾಜ.ಎ, ಮಿಸ್ರಿಯಾ.ವಿ, ಭವಾನಿಶಂಕರ.ಎ.ಎಲ್, ನೂತನ್.ಡಿ, ಗೋಪಾಲಕೃಷ್ಣ.ಎ, ಎನ್.ದೇವಣ್ಣ ಗೌಡ, ಜಯರಾಮ.ಎ, ಹೆಚ್.ಕುಶಾಲಪ್ಪ ಗೌಡ, ದುರ್ಗಾಪರಮೇಶ್ವರಿ, ನಳಿನಾಕ್ಷಿ.ಪಿ.ಎಸ್, ಅನಿತಾ, ರೇಷ್ಮಾ.ಹೆಚ್, ರೋಹಿತ್.ಕೆ, ಸದಾನಂದ.ಎನ್.ಎಸ್, ರೇವತಿ.ಕೆ ಆಯ್ಕೆಯಾದರು.
ಪದನಿಮಿತ್ತ ಸದಸ್ಯರುಗಳಾಗಿ ಪ್ರಮೀಳಾ.ಪಿ.ಎಸ್, ವಾರಿಜಾ.ಎಂ, ಚಂದ್ರಾವತಿ.ಹೆಚ್ ಹಾಗೂ ನಾಮನಿರ್ದೇಶಿತ ಸದಸ್ಯರುಗಳಾಗಿ ವೆಂಕಟ್ ವಳಲಂಬೆ, ಸ್ನೇಹಲತಾ.ಎಸ್.ಕೆ, ಅನ್ವಿತ್.ಎಂ.ವಿ ಆಯ್ಕೆಯಾದರು.
ಈ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಶಾಲೆಗೆ ಕಬ್ಬಿಣದ ಕವಾಟು(ಗೋಡ್ರೇಜ್) ಅನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಯರಾಮ ಅಡ್ಡನಪಾರೆ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪರ್ಲುಮಕ್ಕಿ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರಮೀಳಾ.ಪಿ.ಎಸ್ ಸ್ವಾಗತಿಸಿ ಸ್ನೇಹಲತಾ.ಎಸ್.ಕೆ ವಂದಿಸಿದರು. ಗೀತಾಲಕ್ಷ್ಮಿ.ಎ ಕಾರ್ಯಕ್ರಮ ನಿರೂಪಿಸಿದರು.