Ad Widget

ಮಕ್ಕಳೊಂದಿಗಿರುವ ಪ್ರತಿದಿನವೂ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯೇ

ಕಳೆದೆರಡು ವರ್ಷಗಳಿಂದೀಚೆಗೆ ಶೈಕ್ಷಣಿಕ ಕ್ಷೇತ್ರದಮೇಲೆ ಮಿಡತೆಯಹಿಂಡಿನಂತೆ ಕೊರೋನ ವೈರಸ್ ದಾಳಿ ನಡೆಸಿದೆ ಬರಿಯ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೇ ಪ್ರತಿಯೊಂದು ಕ್ಷೇತ್ರದಮೇಲೆ ಪರಿಣಾಮ ಬೀರಿದೆ ಶಾಲೆಗೆ ಮಕ್ಕಳುಬಾರದೆ ಎರಡು ವರ್ಷಗಳೇ ಕಳೆಯಿತು ದೇಶದ ಭವಿಷ್ಯ ತರಗತಿಯ ನಾಲ್ಕು ಗೋಡೆಯ ಮಧ್ಯೆ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಶಾಲಾ ಕಾಲೇಜು ಪುನರಾರಂಭ ಆಗುವ ಯಾವ ಸ್ಪಷ್ಟತೆಯು ಕಾಣುತ್ತಿಲ್ಲ ಭವಿಷ್ಯದ ದಾರಿ ಬಂದ್ ಅದಂತೆ ಗೋಚರಿಸುತ್ತಿದೆ. ಐದು ವರ್ಷ ಇರುವ ಸರ್ಕಾರಗಳು ಮೂರನೇಯ ವರ್ಷದಲ್ಲಿ ಮುಂದಿನ ಚುನಾವಣೆಯ ಬಗ್ಗೆ ಚಿಂತಿಸುತ್ತಿದೆ ಆದರೆ ಕಳೆದ ಸುಮಾರು ಮೂವತ್ತು ವರ್ಷಗಳಿಂದ ಶಿಕ್ಷಣ ನೀತಿಗಳೇ ಬದಲಾಗಲಿಲ್ಲ ಇದೆಲ್ಲದರ ಮಧ್ಯೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯಲ್ಲಿದ್ದೆವೆ ಆದರೆ ಶಿಕ್ಷಣ ಕ್ಷೇತ್ರಕ್ಕೆ ಅಮೃತಘಳಿಗೆ ಬರುವುದು ಯಾವಾಗ? ಮೂಲಭೂತ ಹಕ್ಕು, ಮೂಲಭೂತ ಕರ್ತವ್ಯ, ರಾಜ್ಯನೀತಿ ನಿರ್ದೇಶನಾತ್ಮಕ ತತ್ವಗಳಲ್ಲಿ ಒತ್ತಿ ಹೇಳಿದ ಶಿಕ್ಷಣ ಮಹತ್ವ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿದೆಯೇ?.

. . . . . . .

‘ಹರ ಮುನಿದರು ಗುರು ಕಾಯ್ವನು’ ದೇವರು ಸಹಾಯ ಮಾಡದೆ ಇದ್ದರು ಇರಬಹುದು ಗುರು ಎಂತಹ ಸಂದರ್ಭದಲ್ಲೂ ಸಹಾಯ ಮಾಡಬಲ್ಲ ಎಂಬ ಮಾತಿದೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿ ಎಂಬ ಸ್ಥಾನ ಪಡೆದಿದೆ ಅಂತಹ ವೃತ್ತಿಯಲ್ಲಿ ಶಿಕ್ಷಕ ಗುರುವಾಗಬೇಕಾದರೆ ಸ್ವಂತ ಶಕ್ತಿಯಿಂದ ಸದಾಕಾಲ ಉರಿಯುವ ದೀಪವಾಗಬೇಕು ಆದರಿಂದ ಪ್ರತಿಯೊಬ್ಬರು ತಮ್ಮ ದೀಪವನ್ನು ಹಚ್ಚಿಕೊಂಡಗ ಅದು ಪ್ರದೀಪವಾಗಿ ಉರಿದು ಶಿಷ್ಯವರ್ಗದಲ್ಲಿ ಸಾರ್ಥಕತೆಯನ್ನು ಕಂಡಾಗ ಗುರುವಿನ ಪಟ್ಟ ಪಾವನವಾಗುವುದು. ವಿಷಯದ ಮೇಲಿನ ಪ್ರೀತಿ, ವೃತ್ತಿಯ ಮೇಲಿನ ಗೌರವ, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದೇ ಭಾವಿಸಿ ಅನನ್ಯ ಪ್ರೀತಿತೋರುವುದು ಶಿಕ್ಷಕನ ಧರ್ಮ. ಪ್ರತಿಗುರುವಿನಲ್ಲಿ ಮಾತೃಹೃದಯವಿದ್ದಾಗ ಕಲಿಸಿದ ವಿದ್ಯೆ ಅಮೃತಪಾನವಾಗುತ್ತದೆ. ನದಿಗಳು ಹರಿದು ಸಾಗರವನ್ನು ಸೇರುವ ಹಾಗೆ ಶಿಷ್ಯಂದಿರು ಗುರುವನ್ನು ಅರಸಿಕೊಂಡು ಆದರ್ಶವೆಂಬ ಸಾಗರ ಸೇರುತ್ತಾರೆ ಜಗತ್ತಿನ ಸರ್ವ ಶ್ರೇಷ್ಠ ಗುರು ಶಿಷ್ಯಂದಿರೆಂದರೆ ಶ್ರೀರಾಮ ವಿಶ್ವಾಮಿತ್ರರು, ಅರ್ಜುನ ದ್ರೋಣಾಚಾರ್ಯರು, ಚಂದ್ರಗುಪ್ತ ಚಾಣಕ್ಯರು, ಶಿವಾಜಿ ಸಮರ್ಥ ರಾಮದಾಸರು, ಸ್ವಾಮಿ ವಿವೇಕಾನಂದ ರಾಮಕೃಷ್ಣ ಪರಮಹಂಸರು ಹೀಗೆ ಶಿಷ್ಯ ಶ್ರೇಷ್ಠನಾಗ ಬೇಕಾದರೆ ಕನಕದಾಸರು ಹೇಳಿದಹಾಗೆ ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಇವರೆಲ್ಲ ಗುರುವಿನ ಮಾರ್ಗದರ್ಶನದಲ್ಲಿ ಪ್ರತಿಭೆ ಪೌರುಷ ತೋರಿದವರು.

ಎಷ್ಟೋ ಜನರು ಹೇಳಿದನ್ನು ಕೇಳಿದ್ದೇನೆ ಶಿಕ್ಷಕ ವೃತ್ತಿಯಲ್ಲಿ ಮಾತ್ರ ಪ್ರತಿದಿನ ಹೊಸ ವಿಷಯಗಳನ್ನು ಕಲಿಯಬಹುದೆಂದು ಅದು ಅತಿಶಯೋಕ್ತಿಯಲ್ಲ ನಿಜ ನಾವು ಪ್ರತಿದಿನ ವಿದ್ಯಾರ್ಥಿಗಳಿಂದಲೇ ಹೊಸ ವಿಷಯ ಕಲಿಯುತ್ತೇವೆ ಅವರು ಹೊಸ ವಿಚಾರಗಳನ್ನು ಕಲಿತ್ತಾಗ ಅವರಿಗಾಗುವ ಸಂಭ್ರಮಕ್ಕೆ ಸಾಟಿ ಇಲ್ಲ ಕಲಿತ್ತದನ್ನು ನಿಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಿ ನಿಮ್ಮ ಜೀವನವನ್ನು ಅತ್ಯಂತ ಸುಂದರಗೊಳಿಸಿಕೊಳ್ಳವವರು ನೀವೇ ಎಂದು ಹೇಳಿದಾಗ ಅತ ಮುಂದೊಂದು ದಿನ ಜೀವನದಲ್ಲಿ ಯಶಸ್ವಿಯಾಗಿ ಸಮಾಜವೇ ಹೆಮ್ಮೆ ಪಡುವಂತಹ ಸ್ಥಾನ ಪಡೆದಾಗ ಶಿಕ್ಷಕರು ಹೇಳಿದ ಮಾತನ್ನು ನೆನಪಿಸಿಕೊಂಡಾಗ ಒಬ್ಬ ಶಿಕ್ಷಕನಿಗೆ ಅದುವೇ ಸನ್ಮಾನ!. ಶಿಕ್ಷಕರಿಗೆ ಪ್ರತಿಯೊಬ್ಬ ವಿದ್ಯಾರ್ಥಿಯು ವಿಶೇಷವೇ ಅವರ ಅಂತರ್ಯದಲ್ಲಿರುವ ಶಕ್ತಿಯನ್ನು ಹೋರ ತೆಗೆದು ಅದಕ್ಕೊಂದು ರೂಪ ನೀಡುವ ಕೆಲಸ ನಮ್ಮದು ”Every Powe within you” ಎಂದು ಸ್ವಾಮಿ ವಿವೇಕಾನಂದರು ಹೇಳಿದಹಾಗೆ ಎಲ್ಲ ಶಕ್ತಿಯು ವಿದ್ಯಾರ್ಥಿಗಳಲ್ಲಿ ಇದೆ ಅದನ್ನು ಹೊರತೆಗೆಯಲು ಸೂಕ್ತ ಸಮಯ ಬೇಕು ಸೂಕ್ತ ಗುರು ಸಿಕ್ಕಾಗ ಯಶಸ್ವಿಯಾಗುತ್ತಾರೆ. ಒಂದು ತಕ್ಕಡಿಯಲ್ಲಿ ಡಾಕ್ಟರ್, ಲಾಯರ್, ಇಂಜನಿಯರ್,ಪೋಲಿಸ್, ಅಧಿಕಾರ ಗಳನ್ನು ಒಂದು ಬದಿಗೆ ಶಿಕ್ಷಕರನ್ನು ಒಂದು ಬದಿಗೆ ಹಾಕಿದ್ರೆ ಶಿಕ್ಷಕರಿದ್ದ ಬದಿಯ ಭಾರ ಜಾಸ್ತಿ ಏಕೆಂದರೆ ಅವರೆಲ್ಲರನ್ನು ತಯಾರುಮಾಡುವವರು ಶಿಕ್ಷಕರೆ.

ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಯೊಬ್ಬ ಸರ್ ಮನೆಯಲ್ಲಿ ಪಿಯುಸಿ ಆಯ್ತು ಅಲ್ವ ಕೆಲಸ ನೋಡು ಅಂತಾರೆ ಸರ್ ನನ್ನ ಪಿಯುಸಿ ಕೆಲಸ ಕೊಡ್ತದ ಸರ್ ಅಂತಾ ಕೇಳ್ದ ಅದ್ಕೆ ನಾನು ನೋಡು ನಾವು ಹೆಚ್ಚು ಕಲಿತಿದೆವೆ ಅಂದ್ರೆ ಹೆಚ್ಚು ಮನುಷ್ಯರಾಗಿದ್ದೇವೆ ಅಂತ ಅರ್ಥ ಯಾವ ಸರ್ಟಿಫಿಕೇಟ್ ಕೆಲಸ ಕೊಡುವುದಿಲ್ಲ ಕೆಲಸ ಮಾಡೊಕೆ ಸ್ಕಿಲ್ ಬೇಕು ಅಂತಾ ಅಂದೆ ಅಕಡೆಯಿಂದ ಹಾಗಾದರೆ ನಾವು ಸ್ಕೂಲಿಗೆ ಬರೋದಾದ್ರುಯಾಕೆ? ಅಂತಾ ಕೇಳಿದ್ರೆ ನನ್ನಂತ್ರ ಉತ್ತರ ಇರಲಿಲ್ಲ ನಾವು ಅವರಿಗೆ ಸ್ಕಿಲ್ ಹೇಳಿಕೊಡಲಿಲ್ಲವಲ್ಲ ಪ್ರತಿಯೊಬ್ಬ ವಿದ್ಯಾರ್ಥಿಯ ಇವತ್ತಿನ ಪ್ರಶ್ನೆ ಇದೇ
ಆಗಿದೆ ನಾವು ಮಾತ್ರ ಮಾರ್ಕ್ಸ್ ಹಿಂದೆ ಓಡ್ತಾ ಇದ್ದೆವೆ. ಶಿಕ್ಷಣ ಕ್ಷೇತ್ರ ಹಿಂದುಳಿದಿರುವಷ್ಟು ಬೇರೆಯಾವ ಕ್ಷೇತ್ರವು ಹಿಂದುಳಿದಿಲ್ಲ ಅಸಮಾನತೆಯ ಮೋದಲ ಕ್ಷೇತ್ರ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ ಶಿಕ್ಷಕರು ಸರಿಯಾಗಿ ಸಿಗುತ್ತಿಲ್ಲ ಹಳೆಯ ಕಾಲದ ಶಾಲಾ ಕಟ್ಟಡಗಳು ಮಳೆಗಾಲದಲ್ಲಂತೂ ಸ್ಮಿಮಿಂಗ್ ಫೂಲ್ ನಂತಗುತ್ತದೆ ಮೂಲಭೂತ ಅಗತ್ಯತೆಗಳೆ ಹೀಗಾದರೆ ಇನ್ನು ಶಿಕ್ಷಣದ ಗುಣಮಟ್ಟ !? ಯಾವ ಸ್ಕಿಲ್ ಬಗ್ಗೆ ಮಾತನಾಡುವುದು! ಅದೇ ವಿದ್ಯಾರ್ಥಿಯೊಬ್ಬ ಖಾಸಗೀ ಶಾಲೆಯಲ್ಲಿ ಕಲಿತರೆ ಬೆಳಿಗ್ಗೆ ಮನೆ ಬಾಗಿಲಿಗೆ ಸ್ಕೂಲ್ ವ್ಯಾನ್ ಕರ್ಕೊಂಡು ಹೊಗೋಕೆ ಬರ್ತದೆ ಬಹುಮಹಡಿಯ ಶಾಲಾ ಕಟ್ಟಡ ಒಂದೇ ವಿಷಯಕ್ಕೆ ಬೇರೆ ಬೇರೆ ಶಿಕ್ಷಕರು ಪ್ರತ್ಯೇಕ ಸ್ಮಿಮಿಂಗ್ ಫೂಲ್ ಕ್ಯಾರಂ ಬೋರ್ಡ್‌ನಿಂದ ಹಿಡಿದು ಕಂಪ್ಯೂಟರ್ ವರೆಗಿನ ಎಲ್ಲ ವ್ಯವಸ್ಥೆಯು ಇದೆ ಸರ್ಕಾರಿ ಶಾಲೆಯು ಹೀಗೆ ಇದ್ದಿದಿದ್ರೆ? ಯಾಕೆ ಈ ಪರಿಯ ಅಸಮಾನತೆ? ಸರ್ಕಾರಿಶಾಲೆಯ ಮಕ್ಕಳು ಮಾಡಿದ ತಪ್ಪದ್ರು ಏನು? ಶಿಕ್ಷಣ ತಜ್ಞರು, ಶಿಕ್ಷಣ ಮಂತ್ರಿಗಳು, ನೀತಿ ನಿರೂಪಕರು ಯಾಕೆ ಅಸಮಾನತೆಯನ್ನು ನೋಡಿ ಸುಮ್ಮನಿದ್ದಾರೆ? ಅಥವಾ ಯೋಗ್ಯರು ತಜ್ಞರು, ಮಂತ್ರಿಗಳು, ನೀತಿನಿರೂಪಕರು ಇಲ್ಲವೋ!? ಶಿಕ್ಷಣಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿಯಿಂದೆ ಎಂದ ಮೇಲೆ ಶಿಕ್ಷಣ ಕ್ಷೇತ್ರದ ಕೊರತೆಗಳು ಸರಿಯಾಗಬೇಕು ಅಲ್ಲವೇ?

ಮುಗ್ಧ ಮನಸ್ಸಿನ ಮಕ್ಕಳ ಹೆಮ್ಮರದಷ್ಟು ಪ್ರಶ್ನೆಗಳಿಗೆ ಉತ್ತರ ಕೋಡುವುದೇ ಒಂದು ಸವಾಲು ಅವರು ಆಡುವ ಆಟ ನೋಡಿ ನಮ್ಮನ್ನು ನಾವೇ ಮರೆಯುವ ಕ್ಷಣಗಳು ಹೊಸ ವಿಷಯ ಕಲಿತು ಅವರನ್ನು ಅವರೆ ಮರೆತು ಆನಂದಿಸುವ ಕ್ಷಣಗಳು ಅವರ ಚಡಪಡಿಕೆ ಅವರ ಕಣ್ಣಲ್ಲಿರುವ ಕನಸು ಮನಸ್ಸಿನಲ್ಲಿರುವ ಆಸೆ ಕನಸ್ಸನ್ನು ನನಸು ಮಾಡಲು ಮಾಡುವ ಪ್ರಯತ್ನಗಳು ಅವರು ಕೇಳಿದ ಪ್ರಶ್ನಗಳಿಗೆ ಉತ್ತರ ಸಿಕ್ಕಾಗ ಅದನ್ನು ಪ್ರೀತಿಯಿಂದ ಸ್ವೀಕರಿಸಿ ಬೀರುವ ಕೀರು ನಗೆ ಕೋಟಿ ನಗುವಿಗೆ ಸಮ ಇದು ಯಾವ ವೃತ್ತಿಯಲ್ಲಿ ಸಿಗ್ತದೆ ಶಿಕ್ಷಕ ವೃತ್ತಿಯಲ್ಲಿ ಮಾತ್ರ ಅನುಭವಿಸಲು ಸಾಧ್ಯ ಇದನ್ನೆ ಹೇಳೋದು ವೃತ್ತಿಯ ಸಾರ್ಥಕತೆ ಅಂತಾ ಶಿಕ್ಷಕ ವೃತಿ ಮಾಡಲು ಪುಣ್ಯ ಪಡೆದಿರಬೇಕು ಅದಕ್ಕೆ ಹಿರಿಯರು ಹೇಳಿರುವುದು ಮಗು ಒಂದು ಗ್ರಂಥ ಇದ್ದಂತೆ ಹೇಗೆ ಬೇಕಾದರು ಓದಿ ತಿಳಿದುಕೊಳ್ಳಬಹುದು ಎಂದು.

ಹೋಮ್ ವರ್ಕ್ ಮಾಡದೆ ಶಾಲೆಗೆ ಬಂದಾಗ ಯಾಕೆ ಮಾಡಿಲ್ಲ ಅಂತಾ ಎರಡು ಪೆಟ್ಟು ಕೊಟ್ಟು ಬಿಡಬಹುದು ಅದಕ್ಕೆ ಮುನ್ನ ಯಾಕೇ ಮಾಡಿಲ್ಲ ಎಂದು ಕೇಳಿದಾಗ ನನ್ನ ಅಮ್ಮನಿಗೆ ಉಷಾರಿರಲಿಲ್ಲ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿದ್ದೆ ಬೆಳಿಗ್ಗೆ ಅಲ್ಲಿಂದಲೇ ಬಂದೇ ಸರ್ ಅನ್ನುವ ಕಾರಣ ಕೊಡ್ತನೆ ಒಬ್ಬ ಮತ್ತೊಬ್ಬ ಸರ್ ತಂದೆ- ತಾಯಿ ಇಬ್ಬರಿಗೂ ಉಷಾರಿರಲಿಲ್ಲ ಕರೆಂಟುಕೂಡ ಇರಲಿಲ್ಲ ಮನೆಯಲ್ಲಿ ಅಂತಾನೆ ಇನ್ನೊಬ್ಬ ಉಷಾರಿರಲ್ಲದೆ ತಂದೆ ತೀರಿಹೋಗಿ ಎರಡು ದಿನ ಆಯ್ತು ಹಾಗೆ ಹೋಮ್ ವರ್ಕ್ ಮಾಡಲು ಆಗಿಲ್ಲ ಎಂದಾಗ ಆವೇಶದಿಂದ ಕೊಟ್ಟ ಪೆಟ್ಟು ನಮ್ಮ ಜೀವನ ಪರ್ಯಾಂತ ಕಾಡುತ್ತದೆ ಯಾಕೆಂದರೇ ನಾವು ಮಕ್ಕಳಾಗೇ ಶಿಕ್ಷಕರದವರಲ್ಲವೇ ನಮ್ಮ ತರಗತಿಯಲ್ಲು ನಮ್ಮ ಸಹಪಾಠಿಗಳ ಇದೆ ರೀತಿಯ ಕಾರಣಗಳು ಇರ್ತಿದ್ವು ಅಲ್ವೆ ಆವೇಶದಿಂದ ಮಾಡಿದ ನಿರ್ಧಾರದ ನಿಜ ಕಾರಣ ತಿಳಿದಾಗ ಅದು ಕೋಡುವ ರೋದನೆ ಒಬ್ಬ ಮಾತೃಹೃದಯಿ ಶಿಕ್ಷಕನಿಗೆ ಯಮಯಾತನೆ ನೀಡುತ್ತದೆ ನಮ್ಮ ನೋವಿಗೆ ನಾವೆ ಸಮಾಧಾನ ಹೆಳ್ಬೇಕು ಯಾರು ಸಮಾಧಾನ ಮಾಡುವವರು ಇರಲ್ಲ ಇಲ್ಲಿ.

ಶಾಲಾ ಕಾಲೇಜುಗಳಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳೇ ಹಬ್ಬದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ ಕಾರ್ಯಕ್ರಮಗಳು ಶಾಲೆಯ ಹೃದಯ ಬಡಿತ ಇದ್ದಹಾಗೆ ಬೆಳಿಗ್ಗೆ ಬಂದು ಗಿಡಗಳಿಗೆ ನೀರು ಹಾಕುವವರತಂಡ ಕುಡಿಯುವ ನೀರು ತರುವವರ ತಂಡ ಗುಡಿಸುವ ತಂಡ ಬೋರ್ಡಿನ ಮೇಲೆ ನುಡಿಮುತ್ತುಗಳನ್ನು ಬರೆಯುವವರು ಚಿಲಿಪಿಲಿ ಹಕ್ಕಿಗಳಂತೆ ಗದ್ದಲ ಗಮ್ಮತ್ತು ಸ್ಟಡಿ ಬೆಲ್ ಆದ ತಕ್ಷಣ ಎಲ್ಲರು ಮೌನವಾಗಿ ಓದಲು ಪ್ರಾರಂಭ ಅಸೆಂಬ್ಲಿಯಲ್ಲಿ ಪ್ರಾರ್ಥನೆ ಹೇಳುವವರರಂತು ಶಾಲೆಯಲ್ಲಿ ಅವರಿಗೆ ಅವರೇ ಹೀರೊಗಳು ಇದ್ದಂತೆ ತರಗತಿಗಳು ಪ್ರಾರಂಭ ಆಗೊದಕ್ಕೆ ಮೊದಲು ಯಾವ ಶಿಕ್ಷಕರು ಬಂದಿದ್ದಾರೆ ಯಾರು ಬರಲಿಲ್ಲ ಎಲ್ಲವನ್ನು ಗಮನಿಸಲು ಒಂದು ತಂಡ ಸಾಮಾನ್ಯವಾಗಿ ಇರ್ತಾರೆ ತರಗತಿ ಪ್ರಾರಂಭವಾದ ತಕ್ಷಣ ಓದಿನ ಕಡೆಗೆ ಗಮನ ಬೆಳಿಗ್ಗೆಯಿಂದ ಸಾಯಂಕಾಲ ವರೆಗೆ ಪಾಠ ಪಠ್ಯೇತರ ಚಟುವಟಿಕೆ ನಡಿತದೆ ಎಲ್ಲ ಮಕ್ಕಳು ಸಾಯಂಕಾಲ ಮನೆಗೆ ಹೋದ ನಂತರ ಇಷ್ಟು ವರೆಗೆ ಜೀವವಿದ್ದ ಕಟ್ಟಡ ಯಾಕೆ ಮೌನವಾಗಿದೆ ಅನ್ನಿಸುತ್ತೆ. ಕಾರ್ಯಕ್ರಮಗಳು ಇದ್ದಾಗ ಮನೆಯ ಕಾರ್ಯಕ್ರಮದ ಹಾಗೆ ಗುಡಿಸಿ ಓರೆಸಿ ಮುಂದಿನ ದಿನವೇ ಎಲ್ಲ ಸಿದ್ಧತೆಗಳು ನಡೆದಿರುತ್ತವೆ ಕೊನೆಯ ಬೆಂಚಿನವರು ಕೆಲಸಕ್ಕೆ ಬನ್ನಿ ಎಂದು ಶಿಕ್ಷಕರು ಕರೆದಾಗ ಅವರಿಗೆ ಖುಷಿಯೇ ಖುಷಿ ಪಾಠ ಹೋಯಿತು ಅದ್ರು ಹಾಜರಿ ಸಿಕ್ಕಿತೆಂದು ಕಾರ್ಯಕ್ರಮ ಶುರುವಾಗುವಾಗ ಎಲ್ಲರು ಹಾಜರ್ ಮಧ್ಯಾಹ್ನ ಊಟಕ್ಕೆ ಸೂಚಿಸಿದ ಸ್ವಯಂ ಸೇವಕರಂತು ಅವತ್ತಿನ ಕಾರ್ಯಕ್ರಮದ ಮುಖ್ಯ ಅತಿಥಿಗಳು ಇದ್ದ ಹಾಗೆ ಸಂಭ್ರಮ ಸಂತಸ ಕಾರ್ಯಕ್ರಮ ಮುಗಿದ ಮೇಲೆ ತಂದ ಡೇಸ್ಕ್ ಬೆಂಚುಗಳನ್ನು ಚೊಕ್ಕವಾಗಿಟ್ಟು ಬೆನ್ನಮೇಲೆ ಬ್ಯಾಗನ್ನೇರಿಸೆಕೊಂಡು ಮನೆಕಡೆ ಪಯಣ. ನಂತರ ಪರೀಕ್ಷೆಗಳು ಬಂದಾಗ ನಾವು ಈ ಸಂಸ್ಥೆಗೆ ಬಂದದ್ದು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಲು ಎಂದು ಓದಿನ ಕಡೆ ಗಮನ. ವಿದ್ಯಾರ್ಥಿಗಳಿಗೆ ಬೇಡವಾದ ಕಾರ್ಯಕ್ರಮವೆಂದರೆ ಬೀಳ್ಕೋಡುಗೆ ಸಮಾರಂಭ ಸೇರುವುದು ಆಕಸ್ಮಿಕ ಅಗಲುವುದು ಅನಿವಾರ್ಯ ಎಂದೆಲ್ಲ ಹೇಳಿದರು ಅವರು ಬಂದು ವೇದಿಕೆಯಮೇಲೆ ಅವರ ಸವಿನೆನಪುಗಳನ್ನು ಕಣ್ಣಿಗೆಕಟ್ಟುವ ಹಾಗೆ ವಿವರಿಸುವಾಗ ನೆಚ್ಚಿನ ಗುರುಗಳ ಬಗ್ಗೆ ಮಾತನಾಡಿದಾಗ ಕರುಳು ಚುರುಕ್ ಅನ್ಸುತ್ತೆ ನೀವು ನಡೆವ ದಾರಿಯಲ್ಲಿ ನಗೆಯ ಹೂವು ಬಾಡದಿರಲಿ ಎಂದು ಅವರ ಜೀವನಕ್ಕೆ ಶುಭಹಾರೈಸಿ ಕಳುಹಿಸಿ ಕೊಡುತ್ತೇವೆ ಮುಂದೆ ಎಲ್ಲದರು ಸಿಕ್ಕಾಗ ಅವರ ಜೀವನಾನುಭವವನ್ನು ನಮಗೆ ಪಾಠ ಮಾಡ್ತಾರೆ ಅವರ ಕನಸು ನನಸಾದ ಸಾರ್ಥಕತೆಯಲ್ಲಿ ನಮ್ಮ ಕಣ್ಣುಗಳು ಒದ್ದೆಯಾಗುತ್ತದೆ ಇದೆ ಅಲ್ವ ಸಾರ್ಥಕತೆ ಅಂದ್ರೆ ಇದೆ ಶಿಕ್ಷಕರ ಜೀವನ.

ನಾವು ಇವತ್ತು ಶಿಕ್ಷಕರಾಗಿರಬಹುದು ನಾವು ಕೂಡ ಮಕ್ಕಳಾಗಿ ಎಲ್ಲ ತುಂಟಾಟವನ್ನಾಡಿ ಶಿಕ್ಷಕರಾದವರು ನಮಗು ನೆಚ್ಚಿನಗುರುಗಳಿದ್ದರು ಅನ್ನೊದನ್ನು ಯಾವತ್ತಿಗು ಮರೆಯೊದ್ದಿಲ್ಲ ಅವರ ಎಲ್ಲ ಆದರ್ಶಗಳನ್ನು ಪಾಲಿಸುತ್ತೆವೆ ಅವರ ಬೋಧನಾ ಶೈಲಿಯನ್ನು ಅನುಸರಿಸುತ್ತೆವೆ ಗುರುಗಳು ಸಿಕ್ಕಾಗ ಅವರ ಎದುರಿನಲ್ಲಿ ಮತ್ತೆ ವಿದ್ಯಾರ್ಥಿಯಾಗಿ ಕೈ ಕಟ್ಟಿ ನಿಂತು ಬಿಡುತ್ತೇವೆ ಅವರ ಮಾತುಗಳಿಂದ ಧನ್ಯತೆಯನ್ನು ಅಸ್ವಾಧಿಸುತ್ತೆವೆ. ಇಂದು ಸೆಪ್ಟೆಂಬರ್ 5ನೇ ತಾರೀಕು ಸ್ವಾಮಿ ವಿವೇಕಾನಂದರ ಜೀವನ ಆದರ್ಶ ದಿಂದಾಗಿ ಶಿಕ್ಷಕರಾಗಿ, ತತ್ವಶಾಸ್ತ್ರಜ್ಞರಾಗಿ, ರಾಜಕರಣಿಯಾಗಿ, ರಾಷ್ಟ್ರಪತಿಯಾಗಿದ್ದರು ಆದರ್ಶ ಶಿಕ್ಷಕರೆಂದೆ ಜನಪ್ರಿಯರಾದ ಡಾ. ಸರ್ವಪಲ್ಲಿ ರಾಧಾಕೃಷ್ಣಣ್ ರವರ ಜನ್ಮದಿನ ದೇಶದಾದ್ಯಂತ ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸುತ್ತೇವೆ ಶಿಕ್ಷಕರಿಗೆ ಇವತ್ತು ಮಾತ್ರವಲ್ಲ ಶಿಕ್ಷಕರದಿನ ಮಕ್ಕಳೊಂದಿಗೆ ಇರುವ ಪ್ರತಿದಿನವು ಶಿಕ್ಷಕರ ದಿನಾಚರಣೆಯೇ ಯಾಕೆಂದರೆ ಮಕ್ಕಳೆಂದರೆ ದೇವರಿಗೆ ಸಮಾನರು ಅಲ್ವೆ.

ಅಂಕಣ
ಪದ್ಮಕುಮಾರ ಗುಂಡಡ್ಕ
ರಾಜ್ಯಶಾಸ್ತ್ರ ಉಪನ್ಯಾಸಕರು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು
8317356278

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!