ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯು ತೀರಾ ಅವ್ಯವಸ್ಥೆಯಿಂದ ಕೂಡಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ.ಯಾವುದೇ ವಾಹನಗಳು ಓಡಾಟ ಮಾಡದ ಸ್ಥಿತಿ ನಿರ್ಮಾಣವಾಗಿದ್ದು ತಕ್ಷಣವೇ ಸಂಬಂಧಿತ ಇಲಾಖೆ ತಾತ್ಕಾಲಿಕ ದುರಸ್ತಿ ಮಾಡಬೇಕು ಎಂದು ಗ್ರಾಮ ಭಾರತ ಟೀಂ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಹಾಗೂ ಸಂಚಾಲಕ ಸುಧಾಕರ ಮಲ್ಕಜೆ ಒತ್ತಾಯಿಸಿದ್ದಾರೆ.
ಕಮಿಲ-ಬಳ್ಪ ರಸ್ತೆಯು ಅನೇಕ ವರ್ಷಗಳಿಂದ ತೀರಾ ಅವ್ಯವಸ್ಥೆಯಿಂದ ಕೂಡಿದ್ದು ಈಗ ಮಳೆಗಾಲ ವೇಳೆಗೆ ವಾಹನ ಸಂಚಾರಕ್ಕೆ ದುಸ್ತರವಾಗಿದೆ. ಯಾವುದೇ ವಾಹನಗಳು ಓಡಾಟ ಮಾಡದ ಸ್ಥಿತಿಯಲ್ಲಿದೆ. ಅನಾರೋಗ್ಯ ಪೀಡಿತರೂ ಸೇರಿದಂತೆ ತುರ್ತು ಸಂದರ್ಭದಲ್ಲಿ ಪರದಾಟ ನಡೆಸಬೇಕಾದ ಸ್ಥಿತಿ ಇದೆ. ಹೀಗಾಗಿ ಈ ಬಗ್ಗೆ ಈಗಾಗಲೇ ನಾಗರಿಕ ಹೋರಾಟ ಕ್ರಿಯಾ ಸಮಿತಿ ಮೂಲಕ ಸಂಬಂಧಿತ ಇಲಾಖೆಗಳ ಗಮನಕ್ಕೆ ತರಲಾಗಿದ್ದು ತಕ್ಷಣವೇ ತಾತ್ಕಾಲಿಕವಾಗಿ ದುರಸ್ತಿ ಮಾಡಲು ಮನವಿ ಮಾಡಲಾಗಿದೆ. 10 ಒಳಗಾಗಿ ರಸ್ತೆ ದುರಸ್ತಿ ಮಾಡದೇ ಇದ್ದರೆ ಸಾರ್ವಜನಿಕರೇ ರಸ್ತೆ ದುರಸ್ತಿ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ತಕ್ಷಣವೇ ಸಂಬಂಧಿತ ಇಲಾಖೆಗಳು ದುರಸ್ತಿ ಮಾಡಬೇಕು ಎಂದು ಗ್ರಾಮ ಭಾರತ ಟೀಂ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಹಾಗೂ ಸಂಚಾಲಕ ಸುಧಾಕರ ಮಲ್ಕಜೆ ಹಾಗೂ ಕಾರ್ಯದರ್ಶಿ ಮಂಜುನಾಥ ಮುತ್ಲಾಜೆ ಒತ್ತಾಯಿಸಿದ್ದಾರೆ.