ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ಈ ಮೊದಲಿತ್ತು. ಆದರೆ ಈ ಬಾರಿಯಿಂದ ನೂತನ ಶಿಕ್ಷಣ ಪದ್ದತಿ ಜಾರಿಯಾಗುತ್ತಿದೆ. ಹೊಸ ಶಿಕ್ಷಣ ಪದ್ದತಿಯಿಂದ ನಮ್ಮದೇ ಇತಿಹಾಸ, ವಾಸ್ತವ ಸಂಗತಿಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಹೇಳಿದರು.
ಬೆಳ್ಳಾರೆ ಪಬ್ಲಿಕ್ ಸ್ಲೂಲ್ ನಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಸ್.ಪಿ. ಶಿವಕುಮಾರ್ ಅವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ಶಿಕ್ಷಣವಿಲ್ಲದ ಯಾವದೇಶವೂ ಉದ್ಧಾರವಾದ ಯಾವ ಇತಿಹಾಸವೂ ಇಲ್ಲ. ಕೊರೊನಾ ದ ಈ ಸಂದರ್ಭದಲ್ಲಿ ಶಿಕ್ಷಕರಿಗೆ ಮಕ್ಕಳಿಗೆ ಬೋಧನೆ ಮಾಡುವುದು ಹೊಸ ಸವಾಲಾಗಿದೆ. ಅದನ್ನು ಯಶಸ್ವಿಯಾಗಿ ಎದುರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮಿ, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪೇರಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸುಳ್ಯ ಘಟಕದ ಸಂಘದ ಅಧ್ಯಕ್ಷ ಶ್ರೀಧರ್ ಗೌಡ,ಪ್ರಧಾನ ಕಾರ್ಯದರ್ಶಿ ಪದ್ಮನಾಭ ಅತ್ಯಾಡಿ , ಕೋಶಾಧಿಕಾರಿ ಶೀಲಾವತಿ,ಸಂಘಟನಾ ಕಾರ್ಯದರ್ಶಿ ಸರೋಜಿನಿ ಹಾಗೂ ವಿವಿಧ ಶಾಲೆಗಳ ಶಿಕ್ಷ ಕ ವರ್ಗದವರು ಉಪಸ್ಥಿತರಿದ್ದರು.