Ad Widget

ಸುಳ್ಯ ರೇಂಜ್ ತಹ್’ಖೀಖ್-ಮುಅಲ್ಲಿಂ ರಿಲೀಫ್ ಫಂಡ್ ಚಾಲನೆ

ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ತಹ್’ಖೀಖ್-2021 ರೇಂಜ್ ವಿಶೇಷ ಸಭೆ ಹಾಗೂ ಮುಅಲ್ಲಿಂ ಡೇ ಆಚರಣೆ ಸುಳ್ಯ ಗ್ರಾಂಡ್ ಪರಿವಾರ್ ಹಾಲ್ ನಲ್ಲಿ ನಡೆಯಿತು. ಮದ್ರಸಗಳಲ್ಲಿ ಕಲಿಸುತ್ತಿರುವ ಅಧ್ಯಾಪಕರ ಕ್ಷೇಮಕ್ಕಾಗಿ ಮುಅಲ್ಲಿಂ ರಿಲೀಫ್ ಫಂಡ್ ಗೆ ಚಾಲನೆ ನೀಡಲಾಯಿತು. ಟಿ.ಎಂ.ಶಹೀದ್ 10,000 ರೂ ಹಸ್ತಾಂತರ ಮಾಡುವ ಮೂಲಕ ಫಂಡ್ ಗೆ ಚಾಲನೆ ನೀಡಿದರು.

ಸುಳ್ಯ ರೇಂಜ್ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ ಐವರ್ನಾಡ್ ಕಾರ್ಯಕ್ರಮ ಉದ್ಘಾಟಿಸಿದರು. ಮುಫತ್ತಿಶ್ ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ವಿಷಯ ಮಂಡಿಸಿದರು. ಇಸ್ಹಾಕ್ ಬಾಖವಿ ಅರಂತೋಡು ದುಆ ನೆರವೇರಿಸಿದರು. ಸುನ್ನಿ ಮಹಲ್ ಅಧ್ಯಕ್ಷರಾದ ಮಂಡೆಕೋಲು ಇಬ್ರಾಹಿಂ ಹಾಜಿ ಕತ್ತರ್ ಶುಭ ಹಾರೈಸಿದರು. ಮೇನೇಜ್ ಮೆಂಟ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಸುಳ್ಯ, ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಂಇಯ್ಯತುಲ್ ಮುಅಲ್ಲಿಮೀನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ ಮೇನೇಜ್ ಮೆಂಟ್ ಪ್ರ. ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!