Ad Widget

ಶಮನಗೊಂಡ ಬಿಜೆಪಿ ಭಿನ್ನಮತ : ಮುಂದಿನ ಚುನಾವಣೆಯ ಸಂಘಟನೆಗೆ ಒತ್ತು- ಸುದರ್ಶನ ಮೂಡಬಿದಿರೆ ; ಒಗ್ಗಟ್ಟಿನ ಮಂತ್ರ ಜಪಿಸಿದ ಎಸ್.ಎನ್. ಮನ್ಮಥ

ಸಂಘಟನೆ ಬೆಳೆದಂತೆ, ಕಾರ್ಯಕರ್ತರ ಪಡೆ ವಿಸ್ತಾರವಾದಂತೆ ನಾಯಕತ್ವ ವಹಿಸುವವರು ಹೆಚ್ಚಾಗುತ್ತಾರೆ. ಇದರಿಂದ ಸಹಜವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿನ ಭಿನ್ನಮತವನ್ನು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ೪ ಗೋಡೆಗಳ ಮಧ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.
ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

. . . . . . .

ಬಿಜೆಪಿಯ ನಾವೆಲ್ಲರೂ ಒಂದೇ ಕುಟುಂಬ ಸದಸ್ಯರಂತೆ ಬಾಳುತ್ತಿದ್ದೇವೆ. ಒಂದು ಕುಟುಂಬದಲ್ಲಿ ಮನಸ್ತಾಪಗಳು ಬರುವಾಗ ಕುಟುಂಬದ ಹಿರಿಯರು ಸಂಧಾನ ನಡೆಸುವಂತೆ ನಾವು ಸಂಧಾನ ನಡೆಸಿದ್ದೇವೆ ಎಂದರು.
ಸಹಕಾರಿ ಸಂಘಗಳ ಚುನಾವಣೆ ,ಗ್ರಾ.ಪಂ. ಚುನಾವಣೆ ವೇಳೆ ನಡೆದ ತಪ್ಪುಗಳ ಕುರಿತು ಸಂಬಂಧಪಟ್ಟವರು ತಪ್ಪೊಪ್ಪಿಕೊಂಡಿದ್ದು ಅವರ ಈ ಹಿಂದಿನ ಸಾಮಾನ್ಯ ಸದಸ್ಯತ್ವ ಹಾಗೂ ಈ ಹಿಂದೆ ಪಕ್ಷ ವಹಿಸಿದ್ದ ಜವಬ್ದಾರಿಯನ್ನು ಮತ್ತೆ ಮುಂದುವರೆಸಲಾಗಿದೆ ಎಂದರು. ಸಹಕಾರಿ ಸಂಘದ ಚುನಾವಣೆಯಲ್ಲಿನ ಗೊಂದಲಗಳ ಕುರಿತು ಸಹಕಾರ ಭಾರತಿ ಕ್ರಮ ಕೈಗೊಳ್ಳಲಿದೆ ಎಂದರು.

ಎಸ್.ಎನ್.ಮನ್ಮಥರಿಂದ ಒಗ್ಗಟ್ಟಿನ ಮಂತ್ರ: ಈ ಹಿಂದೆ ಕೆಲ ಘಟನೆಗಳಿಂದ ಪಕ್ಷಕ್ಕಾದ ತೊಡಕಿನ ಕುರಿತು ವಿಷಾದವಿದೆ. ಮುಂದಿನ ದಿನಗಳಲ್ಲಿ ನಾವು ಪಕ್ಷ ಹೇಳಿದಂತೆ ಕಾರ್ಯನಿರ್ವಹಿಸುತ್ತೇವೆ.ಪಕ್ಷ ನೀಡುವ ಜವಬ್ದಾರಿಯನ್ನೂ ನಿರ್ವಹಿಸುತ್ತೇವೆ. ನಾವೆಲ್ಲರೂ ನಾಳೆಯಿಂದ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಎಸ್.ಎನ್.ಮನ್ಮಥ ಹೇಳಿದರು.

ತಾ.ಪಂ.ಚುನಾವಣೆ ಎದುರಿಸಲು ಸಿದ್ಧ: ತಾ.ಪಂ. ,ಜಿ.ಪಂ. ಚುನಾವಣೆ ಎದುರಿಸಲು ನಮ್ಮ ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಮೀಸಲಾತಿ ಕುರಿತು ಹೈಕೋರ್ಟ್ ಯಾವ ಆದೇಶ ನೀಡಿದರೂ ಬಿಜೆಪಿಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧ್ಯಕ್ಷರು ಹೇಳಿದರು.

ಈ ಸಂದರ್ಭ ಮಂಡಲ‌ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಸಮಿತಿ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎವಿ ತೀರ್ಥರಾಮ, ಪ್ರಮುಖರಾದ ವೆಂಕಟ್ ವಳಲಂಬೆ, ಸುಬೋದ್ ಶೆಟ್ಟಿ ಮೇನಾಲ, ಎನ್.ಎ.ರಾಮಚಂದ್ರ, ಕೇಶವ ಭಟ್ ಮುಳಿಯ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!