Ad Widget

ಸುಬ್ರಹ್ಮಣ್ಯ : ಶಿಕ್ಷಕನ ಮೇಲೆ ಅತ್ಯಾಚಾರ ಆರೋಪ – ಬಂಧನ

ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ವಿಭಾಗದ ಶಿಕ್ಷಕ, ರಾಯಚೂರು ಮೂಲದ ಗುರುರಾಜ್ ಎಂಬವರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತ ವಿದ್ಯಾರ್ಥಿನಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ನೀಡಿದ ಆಧಾರದಲ್ಲಿಆತನನ್ನು ಬಂಧನಕ್ಕೊಳಪಡಿಸಲಾಗಿದೆ. ಫೊಕ್ಸೋ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಈ ಹಿಂದೆಯೂ ಶಿಕ್ಷಕ ಅಸಭ್ಯವಾಗಿ ವರ್ತಿಸುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.

ನೆಲ್ಲೂರು ಕೆಮ್ರಾಜೆ: ಕೆರೆಗೆ ಬಿದ್ದು ತಾಯಿ- ಮಗು ಮೃತ್ಯು

ನೆಲ್ಲೂರು ಕೆಮ್ರಾಜೆ ಯ ಮಾಪಲಕಜೆಯಲ್ಲಿ ಕೆರೆಗೆ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಘಟನೆ ನಡೆದಿದೆ.ತೋಟದಲ್ಲಿನ ಕೆರೆಯ ಬಳಿ ಮಗು ಕಾಲುಜಾರಿ ಬಿದ್ದಾಗ ಅದನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜು ಭಾರದ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ. ಸಂಗಿತಾ ಹಾಗೂ ಮಗುವಿನ ಮೃತದೇಹ ಮೇಲೆತ್ತಲಾಗಿದ್ದು...
Ad Widget

ಬೆಳ್ಳಾರೆ : ಸಚಿವ ಅಂಗಾರರಿಗೆ ಮನವಿ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರರನ್ನು ಭೇಟಿ ಮಾಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ತಡಕಜೆ 3 ಮೂರನೇ ವಾರ್ಡಿನ ಸದಸ್ಯರಾದ ದಿನೇಶ್ ಚಂದ್ರ, ವೀಣಾ, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಜಯರಾಮ ಉಮಿಕ್ಕಳ, ರಾಮಕೃಷ್ಣ ಭಟ್, ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಉಲ್ಲಾಸ್ ಹೊಟೇಲ್ ವಸಂತ, ಮಾಧವ ತಡಕಜೆ, ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಪ್ರದೀಪ್...

ಶಾಂತಿನಗರ : ನ.ಪಂ.ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ

ಇತ್ತೀಚೆಗೆ ಸುಳ್ಯದ ಶಾಂತಿನಗರದಲ್ಲಿ ಗುಂಡು ಹಾರಿಸಿ ಕೊಲೆ ನಡೆದ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿ ಶಾಂತಿನಗರದ ಪದ್ಮನಾಭ ಎಂಬವರ ಮನೆಯಲ್ಲಿ ಬಿದ್ದಿದ್ದರು. ಇದರಿಂದಾಗಿ ಪದ್ಮನಾಭರು ಅನಿವಾರ್ಯವಾಗಿ ಮನೆ ಬದಲಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಅವರಿಗೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ಸಹಾಯಧನ ಮಂಜೂರು ಮಾಡುವರೇ ಕ್ರಮಕೈಗೊಳ್ಳಲಾಗಿದ್ದು ಹಾಗೂ ನಗರ ಪಂಚಾಯಿತ್ ನಿಧಿಯಿಂದ...

ಗುತ್ತಿಗಾರು : ಉಚಿತ ಯೋಗ ಥೆರಪಿ ಆರಂಭ

ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ‌ದಲ್ಲಿ ಪ್ರತಿ ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ 11 ರ ತನಕ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ. ಸೊಂಟ ನೋವು, ಬೆನ್ನು ನೋವು, ಕುತ್ತಿಗೆ ನೋವು, ಗಂಟು ನೋವುಗಳನ್ನು ಶಮನಗೊಳಿಸುವ ಯೋಗ ಥೆರಪಿಯನ್ನು ಯೋಗ ಶಿಕ್ಷಕ ಪ್ರಸನ್ನ ಭಟ್ ಉಚಿತವಾಗಿ ನೀಡಲಿದ್ದಾರೆ.

ಪಂಜ : ಕೋವಿಡ್ ಕೇರ್ ಸೆಂಟರ್ ನಲ್ಲಿ ಗ್ರಾ.ಪಂ.ಸದಸ್ಯ ವಿಜಯಕುಮಾರ್ ನೇತೃತ್ವದಲ್ಲಿ ಸ್ವಚ್ಚತೆ

ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ ಚಾರ್ಮತ ಇವರ ನೇತೃತ್ವದಲ್ಲಿ ಶಾಲೆಯನ್ನು ಸ್ವಚ್ಛತೆ ಮಾಡಲಾಯಿತು.‌ ಪಾಸಿಟಿವ್ ಬಂದವರು ಕೋವಿಡ್ ಕೇರ್ ಗೆ ದಾಖಲಾಗುಲು ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ ತಾನೇ ಸ್ವತಃ ದಾಖಲಾಗಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಜತೆಗೆ ಇತರ ಜನಪ್ರತಿನಿಧಿಗಳಿಗೆ...

ಸುಳ್ಯದಲ್ಲಿಂದು 51 ಕೊರೊನಾ ಪಾಸಿಟಿವ್ – ಸಕ್ರೀಯ ಪ್ರಕರಣಗಳ ಸಂಖ್ಯೆ 442

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 51 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 442ಕ್ಕೇರಿದೆ.ಬಾಳುಗೋಡಿನಲ್ಲಿ 1,ಗುತ್ತಿಗಾರಿನಲ್ಲಿ 3, ಪೇರಾಲಿನಲ್ಲಿ 2, ಆಲೆಟ್ಟಿಯಲ್ಲಿ 1 , ಸುಳ್ಯದಲ್ಲಿ 24, ಅಜ್ಜಾವರದಲ್ಲಿ 5, ಕಲ್ಮಕಾರಿನಲ್ಲಿ 1, ಕೊಲ್ಲಮೊಗ್ರದಲ್ಲಿ 2, ಐವರ್ನಾಡಿನಲ್ಲಿ 2, ಅಮರ ಪಡ್ನೂರಿನಲ್ಲಿ 1, ಮಂಡೆಕೋಲಿನಲ್ಲಿ 1,ನೆಲ್ಲೂರು ಕೆಮ್ರಾಜೆಯಲ್ಲಿ 2, ಅರಂತೋಡಿನಲ್ಲಿ...

ಜರ್ನಲಿಸ್ಟ್ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ- ಜೆ.ಕೆ ರೈ , ಕಾರ್ಯದರ್ಶಿ- ಶಿವಪ್ರಸಾದ್ ಆಲೆಟ್ಟಿ, ಖಜಾಂಜಿ- ಶಿವರಾಮ ಕಜೆಮೂಲೆ

ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ ಇದರ ವಾರ್ಷಿಕ ಮಹಾಸಭೆಯು ಆ.3 ರಂದು ಬೆಳ್ಳಾರೆ ದೇವಿ ಹೈಟ್ಸ್ ಸಭಾಭವನದಲ್ಲಿ ಜರುಗಿತು. ಕೆ.ಜೆ.ಯು. ಅಧ್ಯಕ್ಷ ಉಮೇಶ್ ಮಣಿಕ್ಕಾರ್ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ.ಜೆ. ಯು ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಗೌರವಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಖಜಾಂಜಿ ಶ್ರೀಧರ ಕಜೆಗದ್ದೆ ಉಪಸ್ಥಿತರಿದ್ದರು. ಈ ಸಂದರ್ಭ...

ರೈಲಿನಡಿಗೆ ಬಿದ್ದು ಎಡಮಂಗಲದ ಯುವಕ ಮೃತ್ಯು

ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.ಎಡಮಂಗಲ ಗ್ರಾಮದ ಪಟ್ಲದಮೂಲೆ ನಿವಾಸಿ ಭರತ್ (24) ಮೃತಪಟ್ಟ ದುರ್ದೈವಿ.ಎಡಮಂಗಲದ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರರಾಗಿರುವ ಭರತ್ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದು, ಸಂಜೆ ಎಡಮಂಗಲದಲ್ಲಿರುವ ಟೈಲರ್ ಶಾಪ್ ಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ...

ಬಂದರು ಮತ್ತು ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮ : ಸಚಿವ ಎಸ್.ಅಂಗಾರ ಭರವಸೆ

ಬಂದರು ಮತ್ತು ಮೀನುಗಾರಿಕೆ ಸೇರಿದಂತೆ ಒಳನಾಡು ಜಲ ಸಾರಿಗೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧನಿದ್ದೆ. ನನಗೆ ಈ ಹಿಂದೆ ನಿರ್ವಹಿಸಿದ್ದ ಖಾತೆ ದೊರಕಿರುವುದರಿಂದ ಸಂತಸವಾಗಿದೆ. ಈ ಹಿಂದೆ ಇದೇ ಖಾತೆಯನ್ನು ನಿರ್ವಹಣೆ ಮಾಡಿದ್ದುದರಿಂದ ಪ್ರಗತಿ ಕಾರ್ಯಕ್ಕೆ ಅನುಕೂಲಕರವಾಗಿದೆ. ಅಲ್ಲದೆ ಈ ಹಿಂದಿನ ಯೋಜನೆಗಳನ್ನು ಮುಂದುರೆಸಲು ಇದು...
Loading posts...

All posts loaded

No more posts

error: Content is protected !!