Ad Widget

ಆಳ್ವಾಸ್ ವಿದ್ಯಾರ್ಥಿನಿ ಸುಳ್ಯದ ಹೆಮ್ಮೆಯ ಕುವರಿ ವೃದ್ಧಿ ಹೆಚ್ ರೈ ಪಿಯುಸಿಯಲ್ಲಿ 600 ರಲ್ಲಿ 600 ಅಂಕ

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೃದ್ಧಿ ಹೆಚ್ ರೈ 600 ರಲ್ಲಿ 600 ಅಂಕ ಪಡೆದು ಸುಳ್ಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾಳೆ. ಇವರು ಉಬರಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಹರೀಶ್ ರೈ ಉಬರಡ್ಕ ಮತ್ತು ರಾಜೀವಿ ಹೆಚ್ ರೈ ದಂಪತಿಗಳ ಪುತ್ರಿ.

ಅರಂತೋಡು : ಸರಳ ಬಕ್ರೀದ್ ಆಚರಣೆ

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬ ವನ್ನು ಕೋವಿಡ್ 2ನೇ ಅಲೆಯಿಂದಾಗಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಅರಂತೋಡು ಜುಮ್ಮಾ ಮಸೀದಿ ಖತೀಬ್ ಆಲ್ ಹಾಜ್ ಇಸ್ಹಾಕ್ ಬಾಖವಿ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು. ಮರಣ ಹೊಂದಿದವರಿಗೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಜಮಾತ್ ಪದಾಧಿಕಾರಿಗಳು, ಎಸೋಸಿಯೇಶನ್ ಪದಾಧಿಕಾರಿಗಳು,ಎಸ್ ಕೆ ಎಸ್ ಎಸ್...
Ad Widget

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎನ್ ಎಂ ಸಿ ಯ ಸಾಧನೆ – ವಿಜ್ಞಾನ ವಿಭಾಗದ ಕೃತಿಕಾಳಿಗೆ 600ರಲ್ಲಿ 600

ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 25 ಮಂದಿ ಡಿಸ್ಟಿಂಕ್ಷನ್, 24 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕೃತಿಕಾ.ವೈ.ಸಿ 600ರಲ್ಲಿ 600 ಪೂರ್ಣ ಅಂಕಗಳು, ಮಹಮ್ಮದ್ ಮುಯೀಫ್ 599 ಹಾಗೂ ಯಶವಂತ್.ವೈ.ಪಿ 596 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಡಿಸ್ಟಿಂಕ್ಷನ್,...

ಸುಳ್ಯ : ಪತ್ರಿಕಾ ದಿನಾಚರಣೆ-ಸನ್ಮಾನ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಇಂದು ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿ ಮಾತನಾಡಿದರು. ಪತ್ರಿಕೆಗಳಲ್ಲಿ ಬರುವ ವರದಿಗಳಲ್ಲಿ ಸತ್ಯಾಸತ್ಯತೆ,ನಿಖರತೆ ಜತೆಗೆ ಸಂಪೂರ್ಣತೆ ಇದ್ದರೆ ಮಾತ್ರ ಉತ್ರಮ ವರದಿಯಾಗಬಲ್ಲುದು....

ಮುಕ್ಕೂರು-ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಜಯಂತ ಗೌಡ ಕುಂಡಡ್ಕ

ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ  ಸಮಿತಿ ಇದರ 2021-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ಕೂರಿನಲ್ಲಿ ಜು.20 ರಂದು ನಡೆಯಿತು. ಗೌರವಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷರಾಗಿ ಜಯಂತ ಕುಂಡಡ್ಕ, ಕಾರ್ಯದರ್ಶಿಯಾಗಿ ಶಶಿಕುಮಾರ್ ಬಿ.ಎನ್., ಕೋಶಾಧಿಕಾರಿಯಾಗಿ ಜೀವನ್ ಕೊಂಡೆಪ್ಪಾಡಿ ಆಯ್ಕೆಯಾದರು. ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,...

ಕಾಡುಸೊರಂಜ ರಸ್ತೆ ದುರಸ್ತಿ

ಮಂಡೆಕೋಲು ಗ್ರಾಮದ ಕಾಡುಸೊರಂಜ - ಅಮೈ ರಸ್ತೆಯು ತೀರಾ ಹದಗೆಟ್ಟಿದ್ದು ಊರಿನ ಯುವಕರು ಸೇರಿ ದುರಸ್ತಿಪಡಿಸಿದರು. ಶ್ರಮದಾನದಲ್ಲಿ ಮಹೇಶ್, ಪ್ರಶಾಂತ್, ಮಿತೇಶ್, ದಯಾನಂದ ಪಿ.ಕೆ.,ಕೃತೇಶ್, ಕಿಶನ್ ಭಾಗವಹಿಸಿದ್ದರು.‌

ಜು.21 : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ – ಸನ್ಮಾನ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಸನ್ಮಾನ ಹಾಗೂ ಉಪನ್ಯಾಸ ಜುಲೈ 21 ರಂದು ಪೂ ಪೂ.ಗಂಟೆ 10ಕ್ಕೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಲಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಕಣಕಾರರು ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ...

ಜುಲೈ 22ರಂದು ಯುವ ರೆಡ್ ಕ್ರಾಸ್ ಘಟಕದಿಂದ ವನಮಹೋತ್ಸವ ಕಾರ್ಯಕ್ರಮ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಗ್ರಾಮ ಪಂಚಾಯತ್ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಪ್ರಯುಕ್ತ "ಹಸಿರು-ಉಸಿರು" ವನಮಹೋತ್ಸವ ಕಾರ್ಯಕ್ರಮ ಜು. 22ರಂದು ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ನಡೆಯಲಿದೆ. ಸುಳ್ಯದ ವಲಯ...

ಬೇಕಾಗಿದ್ದಾರೆ

ಪತ್ರಿಕೆ ಹಾಗೂ ವೆಬ್ಸೈಟ್ ನಲ್ಲಿ ಕೆಲಸ ಮಾಡಲು ಆಸಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಾರ್ಟ್ ಟೈಮ್ ಆಗಿಯೂ ಕೆಲಸ ಮಾಡಬಹುದು. ತಮ್ಮ ಊರಿನಲ್ಲಿದ್ದುಕೊಂಡು ಕೆಲಸ ಮಾಡಬಹುದು. ಒಂದು ವಾರ ತರಬೇತಿ ನೀಡಲಾಗುವುದು. ಉತ್ತಮ ವೇತನ ಹಾಗೂ ಕಮಿಷನ್ , ಐ.ಡಿ ಕಾರ್ಡ್ ಕೊಡಲಾಗುವುದು. ಆಸಕ್ತರು ತಮ್ಮ ಬಯೊಡೇಟಾ ವಾಟ್ಸಾಪ್ ಮಾಡಿ 9449387044

ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಲು ಸ್ಥಳೀಯರ ಒತ್ತಾಯ

ಮೆಸ್ಕಾಂ ಕಛೇರಿ ಎದುರು ನಗರ ಪಂಚಾಯತ್ ವತಿಯಿಂದ ಇಂಟರ್ ಲಾಕ್ ಅಳವಡಿಸಲಾಗಿದ್ದು ಅಲ್ಲಿರುವ ವಿದ್ಯುತ್ ಕಂಬ ತೆಗೆಯದೇ ಇಂಟರ್ ಲಾಕ್ ಅಳವಡಿಸಿದ್ದಾರೆ‌. ಇಲ್ಲಿ ರಸ್ತೆ ತಿರುವಿನಿಂದ ಕೂಡಿದ್ದು ಎಚ್ಚರ ತಪ್ಪಿದರೆ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಲು ಸ್ಥಳೀಯಾಡಳಿತ ಹಾಗೂ ಮೆಸ್ಕಾಂ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Loading posts...

All posts loaded

No more posts

error: Content is protected !!