Ad Widget

ಬಸ್ ಪಾಸ್ ವ್ಯವಸ್ಥೆ ಹಾಗೂ ಹಾಸ್ಟೆಲ್ ಗಳನ್ನು ಪ್ರಾರಂಭಿಸುವ ಬಗ್ಗೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಲು ಎಬಿವಿಪಿ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ ಹಾಸ್ಟೆಲ್ ಗಳನ್ನು ಪ್ರಾರಂಭಿಸುವ ಕುರಿತು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಒದಗಿಸುವ ಬಗ್ಗೆ ಸರಕಾರಕ್ಕೆ ತಹಶಿಲ್ದಾರ್ ಮುಖಾಂತರ ಮನವಿಯನ್ನು ನೀಡಲಾಯಿತು. ಕೋವಿಡ್ ಎರಡನೆಯ ಅಲೆಯಿಂದಾಗಿ ರಾಜ್ಯದ ಎಲ್ಲಾ ಹಾಸ್ಟೆಲ್ ಗಳು ಹಾಗೂ ಕಾಲೇಜುಗಳು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಬಂದ್ ಆಗಿದ್ದವು. ಇದೀಗ ಸರಕಾರ...

ಕೊಡಗು ಸಂಪಾಜೆ ಶಾಲೆಗೆ ಲ್ಯಾಪ್ ಟಾಪ್ ಕೊಡುಗೆ

ಬದುರುಲ್ ಹುದಾ ಗಲ್ಫ್ ಕಮಿಟಿ ಸಂಪಾಜೆ ಇದರ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ ಇಲ್ಲಿಗೆ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಲಾಯಿತು. ಆನ್ಲೈನ್ ತರಗತಿಗಳು ನಡೆಯುವ ಈ ಲಾಕ್ಡೌನ್ ಸಮಯದಲ್ಲಿ ತರಗತಿಗಳು ಯಾವುದೇ ಅಡಚಣೆಗಳು ಇಲ್ಲದೆ ನಡೆಯಲು ಗಲ್ಫ್ ಕಮಿಟಿ ವತಿಯಿಂದ ತಾವು ಕಲಿತ ಶಾಲೆಗೆ ಲ್ಯಾಪ್‌ಟಾಪ್ ನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ...
Ad Widget

ಮಣಿಯಾನ ಓಬಯ್ಯ ಗೌಡ ನಿಧನ

ಗುತ್ತಿಗಾರು ಗ್ರಾಮದ ಮಣಿಯಾನ ಕುಟುಂಬದ ಹಿರಿಯರಾದ ಓಬಯ್ಯ ಗೌಡ (90) ಸ್ವಗೃಹದಲ್ಲಿ ಇಂದು ನಿಧನರಾದರು. ಹಲವು ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಮೃತರು ಪುತ್ರರಾದ ಪಿಡಿಓ ಪುರುಷೋತ್ತಮ, ದುರ್ಗೇಶ್, ಸೀತಾರಾಮ, ಶಿವಕುಮಾರ ಹಾಗೂ ಪುತ್ರಿ ಶ್ರೀಮತಿ ಮಮತಾ ಹಾಗೂ ಅಳಿಯ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಜ್ಜೋಡಿ : ಮನೆಯ ಮೇಲೆ ಮರ ಬಿದ್ದು ಹಾನಿ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯ ನಿವಾಸಿ ಐತೆ ಎಂಬುವವರ ಮನೆಯ ಮೇಲೆ ಜು.22ರ ಸಂಜೆ ಮರ ಉರುಳಿ ಬಿದ್ದಿದ್ದು ಮನೆಗೆ ಅಪಾರ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಿಯರು ಮರ ತೆರವು ಹಾಗೂ ದುರಸ್ತಿ ಕಾರ್ಯಕ್ಕೆ...

ಸುಳ್ಯದಲ್ಲಿಂದು 42 ಕ್ಕೇರಿದ ಕೊರೊನಾ

ಸುಳ್ಯ ತಾಲೂಕಿನಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು 42 ಪಾಸಿಟಿವ್ ಬಂದಿದೆ. ಮರ್ಕಂಜ ಗ್ರಾಮದ ದಾಸರಬೈಲಿನಲ್ಲಿ 7 ಪ್ರಕರಣ ಕಂಡುಬಂದಿದೆ. ತಾಲೂಕಿನಲ್ಲಿ ಒಟ್ಟು 199 ಸಕ್ರೀಯ ಸೋಂಕಿತ ಪ್ರಕರಣಗಳಿವೆ.

ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ವಿಷ್ಣುಪ್ರಕಾಶ್ ಟಿ.ಜಿ. 600 ರಲ್ಲಿ 600 ಅಂಕ

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ಸಿ .ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ತುದಿಯಡ್ಕ ವಿಷ್ಣುಪ್ರಕಾಶ್ ಟಿ.ಜಿ ರವರು 600 ರಲ್ಲಿ 600 ಅಂಕ ಗಳಿಸಿದ್ದಾರೆ. ಆಲೆಟ್ಟಿ ಗ್ರಾಮದ ತುದಿಯಡ್ಕ ಪ್ರಗತಿಪರ ಕೃಷಿಕ, ರೋಟರಿ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಗಿರಿಜಾಶಂಕರ.ಟಿ ಮತ್ತು ಶ್ರೀಮತಿ ಜಯಶ್ರೀ ದಂಪತಿಗಳ ಪುತ್ರ.

ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಸುಳ್ಯದ ಅನುಷಾ ಪ್ರಭು 600 ರಲ್ಲಿ 600 ಅಂಕ

ಸುಳ್ಯ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಕೆ.ಅನುಷಾ ಪ್ರಭು ರವರು 600 ರಲ್ಲಿ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.ಇವರು ಸುಳ್ಯದ ಉದ್ಯಮಿ ಪ್ರಗತಿಪರ ಕೃಷಿಕ ಅಶೋಕ ಪ್ರಭು ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪ್ರಭು ದಂಪತಿಯ ಪುತ್ರಿ.

ಅಡ್ಯಡ್ಕ:ಮರ ಬಿದ್ದು ರಸ್ತೆ ತಡೆ

ಅರಂತೋಡು :ಅಡ್ಯಡ್ಕ ಪೆತ್ತಾಜೆ ಯಲ್ಲಿ ರಸ್ತೆಗೆ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಪೆತ್ತಾಜೆಯಿಂದ ವರದಿಯಾಗಿದೆ.ಮರವನ್ನು ತೆರವು ಗೊಳಿಸುವ ಕಾರ್ಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ವೇಣು,ತೊಡಿಕಾನ ದೇವಸ್ಥಾನ ಮ್ಯಾನೇಜರ್ ಆನಂದ ಕಲ್ಲಗದ್ದೆ,ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಗುರು ನಾರ್ಕೋಡು ಸೇರಿದಂತೆ ಕಲ್ಲಗದ್ದೆ ಜನರು ಸಹಕರಿಸಿ ತೆರವು ಗೊಳಿಸಲಾಯಿತು.

ಅಪಪ್ರಚಾರಕ್ಕೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ – ವಿನಯಕುಮಾರ್ ಕಂದಡ್ಕ

ಸುಳ್ಯ ನಗರ ಪಂಚಾಯತ್ ನ ಹತ್ತನೇ ವಾರ್ಡ್ ನ ರಸ್ತೆಯ ದುರವಸ್ಥೆ ಕುರಿತು ಅನಗತ್ಯ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಸುಳ್ಯದ ಕೋರ್ಟ್ ಮುಂಭಾಗದಿಂದ ಕುರುಂಜಿ ಗುಡ್ಡೆಗೆ ಹೋಗುವ ರಸ್ತೆ ವರ್ಷಗಳಿಂದ ಅಭಿವೃದ್ಧಿಗೆ ಬಾಕಿ ಇದ್ದು ಇದೀಗ ಶಾಸಕರ ವಿಶೇಷ ಪ್ರಯತ್ನದಿಂದ ಈ ರಸ್ತೆಗೆ ಈಗಾಗಲೇ 20ಲಕ್ಷರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯು ಮುಗಿದಿರುತ್ತದೆ. ಮಳೆಯು ಕಡಿಮೆಯಾದ ಕೂಡಲೇ ಸದ್ರಿ...

ಸುಳ್ಯ : ಬಿಜೆಪಿ ಮಹಿಳಾ ಮೋರ್ಚಾ ವಿಶೇಷ ಕಾರ್ಯಕಾರಿಣಿ

ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆಯು ಸುಳ್ಯದ ಅಂಬಟೆಡ್ಕದ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ಇಂದು ಜರುಗಿತು.ವಿಶೇಷ ಕಾರ್ಯಕಾರಿಣಿ ಸಭೆಯನ್ನು ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಪೂಜಾ ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮೂರು ತಿಂಗಳಿಗೊಮ್ಮೆ ನಡೆಯುವ ವಿಶೇಷ...
Loading posts...

All posts loaded

No more posts

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ