Ad Widget

ಕೊಡಿಯಾಲಬೈಲು ಸ್ಮಶಾನಕ್ಕೆ ಬೀಗ ಹಾಕಿದ್ದನ್ನು ಖಂಡಿಸಿ ವಿ ಹೆಚ್ ಪಿ, ಭಜರಂಗದಳ ವತಿಯಿಂದ ತಹಶೀಲ್ದಾರ್, ಇಒ ಗೆ ಮನವಿ

ಉಬರಡ್ಕ ಮಿತ್ತೂರು ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ಸಾರ್ವಜನಿಕ ಮುಕ್ತಿಧಾಮ ಹಿಂದೂ ರುದ್ರ ಭೂಮಿಯ ಗೇಟಿಗೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸೇರಿ ಬೀಗ ಹಾಕಿರುವುದನ್ನು ಖಂಡಿಸಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯವರು ಸುಳ್ಯ ತಾಲೂಕು ತಹಶೀಲ್ದಾರರವರಿಗೆ ಹಾಗೂ ಇ.ಒ ರವರಿಗೆ ಜು 28 ರಂದು ಮನವಿ ಸಲ್ಲಿಸಿದರು.ಕೊಡಿಯಾಲಬೈಲಿನಲ್ಲಿರುವ ಹಿಂದೂ...

ಕಮಲಾಕ್ಷ ಕುಂಟಿಕಾನ ನಿಧನ

ಪೆರಾಜೆ ಗ್ರಾಮದ ಕುಂಟಿಕಾನ ಕಮಲಾಕ್ಷ ಅವರು ಅಲ್ಪಕಾಲದ ಅಸೌಖ್ಯದಿಂದ ಜು. 27ರಂದು ನಿಧನರಾದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಜಾನಕಿ, ಪುತ್ರರಾದ ಯತೀಶ, ರಾಮಚಂದ್ರ, ಪುತ್ರಿ ಲೀಲಾವತಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
Ad Widget

ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ – ನಾಳೆ ಪ್ರಮಾಣವಚನ

ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ - ನಾಳೆ ಪ್ರಮಾಣವಚನ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಸಂಜೆ ನಡೆದ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.‌ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯಿತ ಸಮುದಾಯದ ಪ್ರಭಲ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ...

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾದರು.ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ.ಎಂ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು.ಸಂಘದ ನಿರ್ದೇಶಕರಾದ ಕೇಶವ ಕುಂದರ್ ,ಪುಷ್ಪರಾಜ್ ಬಿ.ಎನ್,ಇಬ್ರಾಹಿಂ...

ಕೊಡಿಯಾಲಬೈಲು ಗಾಂಧಿ ವನದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ 3ನೇ ವರ್ಷದ ವನ ಮಹೋತ್ಸವ

ಕೊಡಿಯಾಲಬೈಲು ಗಾಂಧಿ ವನದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ 3ನೇ ವರ್ಷದ ವನ ಮಹೋತ್ಸವಪಶುಸಂಗೋಪನಾ ಇಲಾಖೆ ಸುಳ್ಯ, ಅರಣ್ಯ ಇಲಾಖೆ ಸುಳ್ಯ ಹಾಗೂ ಗಾಂಧಿ ಚಿಂತನೆ ವೇದಿಕೆ ಸುಳ್ಯ ಇವರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಾದ ನಾಗರಿಕ ಹೋರಾಟ ಸಮಿತಿ ಕೊಡಿಯಾಲಬೈಲು, ಮಹಮ್ಮಾಯಿ ಸೇವಾ ಸಮಿತಿ ಕೊಡಿಯಾಲಬೈಲು, ಶ್ರೀವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲಬೈಲು, ವರಲಕ್ಷ್ಮಿ ಯುವತಿ...

ಪೆರುವಾಜೆಯಲ್ಲಿ ಗಣಪತಿ ಹೋಮ ಮತ್ತು ದುರ್ಗಾ ಪೂಜೆ

ಶ್ರೀ ಜಲದುರ್ಗಾದೇವೀ ದೇವಸ್ಥಾನ ಪೆರುವಾಜೆಯಲ್ಲಿ ಗಣಪತಿ ಹೋಮ ಮತ್ತು ದುರ್ಗಾ ಪೂಜೆ ಜು.17 ರಿಂದ ಆರಂಭಗೊಂಡಿದೆ. ಶ್ರೀ ಕ್ಷೇತ್ರದಲ್ಲಿ 48 ದಿನಗಳ ಪೂಜೆ ನಡೆಯಲಿದೆ

ಐವರ್ನಾಡಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ರಾಷ್ಟ್ರಾಭಿಮಾನಿ ವೇದಿಕೆ ಐವರ್ನಾಡು ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆಯು ಜು.26 ರಂದು ಐವರ್ನಾಡು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ನವೀನ್ ಚಾತುಬಾಯಿ ಉಪಸ್ಥಿತರಿದ್ದರು. ಕಿಶನ್ ಜಬಳೆ ಸ್ವಾಗತಿಸಿ,...

ಸುಬ್ರಹ್ಮಣ್ಯ: ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ – ಯತೀಶ್ ಕುಲ್ಕುಂದ ಅವರಿಗೆ ಸನ್ಮಾನ

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇತ್ತೀಚೆಗೆ ನಿವೃತ್ತರಾದ ಯೋಧ ಯತೀಶ್ ಕುಲ್ಕುಂದ ಅವರನ್ನು ಅವರ ಕುಲ್ಕುಂದ ಮನೆಯಲ್ಲಿ ಜು.26 ರಂದು ಗೌರವಿಸಲಾಯಿತು. ಈ ಸಂದರ್ಭ ರೋಟರಿ ಕ್ಲಬ್ ನ ಅಧ್ಯಕ್ಷರಾದ ವಿಜಯಕುಮಾರ್ ಅಮೈ, ಝೋನಲ್ ಲೆಫ್ಟಿನೆಂಟ್ ಭರತ್ ನೆಕ್ರಾಜೆ, ಕಾರ್ಯದರ್ಶಿ ಶಿವರಾಮ್ ಏನೆಕಲ್ಲು, ಲೋಕೇಶ್ ಬಳ್ಳಡ್ಕ, ಕಿಶೋರ್ ಕುಮಾರ್ ಕೂಜುಗೋಡು,...

ನಾಳೆಯಿಂದ ಕುಕ್ಕೆ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಸೇವೆಗಳು, ಅನ್ನಸಂತರ್ಪಣೆ ಆರಂಭ – ಜುಲೈ 29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆಗೆ ಅವಕಾಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆಯಿಂದ ಸಾಂಪ್ರದಾಯಿಕ ಸೇವೆಗಳು ಆರಂಭಗೊಳ್ಳಲಿದೆ. ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29(ಗುರುವಾರ) ರಿಂದ ಪ್ರಾರಂಭಗೊಳ್ಳಲಿದೆ. ಸರಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30...

ಸುಳ್ಯ : ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ಪ್ರಭಾರಿ ಶಿವಾನಂದ ಕುಕ್ಕುಂಬಳ, ಯುವ ಮೋರ್ಚಾ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಯುವ ಮೋರ್ಚಾ ಸುಳ್ಯ ಮಂಡಲಉಪಾಧ್ಯಕ್ಷ ಮನುದೇವ್ ಪರಮಲೆ,...
Loading posts...

All posts loaded

No more posts

error: Content is protected !!