Ad Widget

ಕುಕ್ಕೆಯನ್ನು ಮತ್ತಷ್ಟು ಹಸಿರಾಗಿಸುವ ಬೃಹತ್ ವನ ಸಂವರ್ಧನಾ ಕಾರ್ಯಕ್ರಮ – 2000 ಗಿಡ ನೆಡುವ ಮೂಲಕ ಹಸಿರು ಕುಕ್ಕೆ ಯೋಜನೆಗೆ ಚಾಲನೆ

ಕುಮಾರಧಾರ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡುಗಳ ನಡುವಣ ಇರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಹಸಿರುಮಯವಾಗಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು. ಏಕಕಾಲದಲ್ಲಿ ೧೪ ಕಡೆ ವಿವಿಧ ಜಾತಿಯ ಸಸ್ಯಗಳನ್ನು ೧೪ ಗಣ್ಯರು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್-೧೯ ಮಾರ್ಗಸೂಚಿಗೆ ಅನುಗುಣವಾಗಿ ಅಗಾಧ...

ಕುಕ್ಕೆ ಕ್ಷೇತ್ರದಲ್ಲಿ ರೂ.3೦೦ ಕೋಟಿ ವೆಚ್ಚದಲ್ಲಿ 3ನೇ ಹಂತದ ಅಭಿವೃದ್ಧಿ ಕಾಮಗಾರಿ – ಮಾಸ್ಟರ್ ಪ್ಲಾನ್ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಮಾರು ರೂ ೩೦೦ ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆಗಳ ಬಗ್ಗೆ ಸಭೆಯಲ್ಲಿ ವರದಿ ಸಿದ್ಧಪಡಿಸಿ ಚರ್ಚಿಸಲಾಯಿತು. ಅಭಿವೃದ್ಧಿ ಕೆಲಸಗಳು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ...
Ad Widget

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷರಂಗದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ

ಸಂಪಾಜೆ : ಖ್ಯಾತ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ (78 ) ಅವರು ವಯೋ ಸಹಜ ಅಸೌಖ್ಯದಿಂದ ಜು.13 ರಂದು ನಿಧನರಾದರು. ಕೊಡಗು ಜಿಲ್ಲೆಯ ಸಂಪಾಜೆಯ ರಾಮಣ‍್ಣ ರೈ ಹಾಗೂ ತಾಯಿ ಕಾವೇರಿ ರೈ ಯವರ ಪುತ್ರ. ಇವರ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದರು ಮತ್ತು ಶೀನಪ್ಪ ರೈ ಸಂಪಾಜೆಯವರಿಗೆ ಮಾರ್ಗದರ್ಶಕರಾಗಿದ್ದರು. ಇವರು ನಾಲ್ಕನೇ...

ಕಲ್ಮಕಾರು : ಸ್ವಸಹಾಯ ಸಂಘದ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.13 ರಂದು ಕಲ್ಮಕಾರು ಒಕ್ಕೂಟದ 42 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ನ್ಯಾಯವಾದಿಗಳಾದ ಗುರುಚರಣ್ ಕೊಪ್ಪಡ್ಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾದ ಪುಷ್ಪರಾಜ್ ಪಡ್ಪು ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ರಾಧಾಕೃಷ್ಣ, ನಾರಾಯಣ, ಚಂದ್ರಶೇಖರ್, ಕಲ್ಮಕಾರು ಒಕ್ಕೂಟದ ಜತೆ...

ಬಾಳುಗೋಡು : ಸ್ವಸಹಾಯ ಸಂಘದ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.13 ರಂದು ಬಾಳುಗೋಡು ಒಕ್ಕೂಟದ 42 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಹರಿಹರ ಪಲ್ಲತ್ತಡ್ಕ ಸೇವಾ ಕೇಂದ್ರದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳುಗೋಡು ಒಕ್ಕೂಟದ ಅಧ್ಯಕ್ಷರಾದ ಲೋಕೇಶ್.ಬಿ ವಹಿಸಿದ್ದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ, ನಿಕಟಪೂರ್ವ ಅದ್ಯಕ್ಷರಾದ ಜಯರಾಮ್, ತಾಲೂಕು ಆಂತರಿಕ ಲೆಕ್ಕ...

ಕೊಲ್ಲಮೊಗ್ರ : ಸ್ವಸಹಾಯ ಸಂಘದ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.13 ರಂದು ಕೊಲ್ಲಮೊಗ್ರ ಒಕ್ಕೂಟದ 40 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಟ್ಟ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲಮೊಗ್ರ ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ದೋಣಿಪಳ್ಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ...

ದೇವಚಳ್ಳ : ಸ್ವಸಹಾಯ ಸಂಘದ ಲಾಭಾಂಶ ವಿತರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ದೇವಚಳ್ಳ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರ ಲಾಭಾಂಶ ವಿತರಣಾ ಕಾರ್ಯಕ್ರಮವು ಹಣ ಸಂಗ್ರಹಣ ಕೇಂದ್ರ ದೇವಚಳ್ಳದಲ್ಲಿ ನಡೆಯಿತು .ಒಟ್ಟು ಒಕ್ಕೂಟದಲ್ಲಿ 39 ಸಂಘಗಳಿಗೆ ಲಾಭಾಂಶ ವಿತರಣೆ ನಡೆದಿದ್ದು ಸಾಂಕೇತಿಕವಾಗಿ ತೃಪ್ತಿ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆಯ 52000 ಚೆಕ್ಕನ್ನು...

ಸುಳ್ಯದ ಕ್ರೀಡಾ ಸಾಧಕಿ ಗೀತಾ ಕಂದಡ್ಕ ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ನೇಮಕ

ಕಿರಿಯ ವಯಸ್ಸಿನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ದಾವಣಗೆರೆ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ, ಸುಳ್ಯದ ಗೀತಾ ಕಂದಡ್ಕ ಅವರನ್ನು ವಿ.ವಿ. ಕುಲಪತಿಗಳೂ ಆಗಿರುವ ರಾಜ್ಯಪಾಲರು ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕ ಮಾಡಿದ್ದಾರೆ. ಕಾಲೇಜು ಜೀವನದಲ್ಲಿಯೇ...

ಸುಳ್ಯ: ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಸಂಘದ ಯಕ್ಷಗಾನ ತರಬೇತಿ ಉದ್ಘಾಟನೆ

ಕೋಡ್ಲ ಗಣಪತಿ ಭಟ್ ಸಂಚಾಲಕತ್ವದ ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಸಂಘದ 38ನೇ ವರ್ಷದ ಯಕ್ಷಗಾನ ತರಬೇತಿ ಕಾರ್ಯಕ್ರಮವು ಸುಳ್ಯದ ಶ್ರೀ ಚೆನ್ನಕೇಶವ ದೇವಾಸ್ಥಾನದ ರಾಜಗೋಪುರದ ಸಭಾಂಗಣದಲ್ಲಿ ಜು.11ರಂದು ಉದ್ಘಾಟನೆಗೊಂಡಿತು. ಸುಳ್ಯದ ಈಶ ಸೋಲಾರ್ & ಬ್ಯಾಟರಿ ಸಂಸ್ಥೆಯ ಮಾಲಕ ರಾಜೇಶ್ ಶೆಟ್ಟಿ ಮೇನಾಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯಕ್ಷಗಾನ ಒಂದು ಅದ್ಭುತಕಲೆಯಾಗಿದ್ದು, ಅವಿವಿಭಜಿತ ದಕ್ಷಿಣ ಕನ್ನಡ...

ಅಮರ ಸುದ್ದಿ ಅಭಿಯಾನ : ನಿಮ್ಮೂರಿನ ಸಮಸ್ಯೆಗಳಿಗೆ ಧ್ವನಿಯಾಗಲಿದೆ – ಸಮಸ್ಯೆಗಳ ಬಗ್ಗೆ ತಿಳಿಸಿ

ಸುಳ್ಯ ತಾಲೂಕು ಗ್ರಾಮಾಂತರ ಪ್ರದೇಶಗಳ ತಾಣ. ಇಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಅದರಲ್ಲಿಯೂ ತುರ್ತು ಅಗತ್ಯಗಳು ಹಲವಾರು ಇವೆ. ಗ್ರಾ.ಪಂ.ಅಧ್ಯಕ್ಷರ, ಶಾಸಕರ, ಸಚಿವರ ಭರವಸೆಯ ಬಳಿಕವೂ ಬಗೆ ಹರಿಯದ ಹಲವಾರು ಸಮಸ್ಯೆಗಳಿವೆ. ಅವುಗಳಿಗೆ ಮಾಧ್ಯಮ ಸ್ಪರ್ಶ ನೀಡಿ ಸಂಬಂಧಪಟ್ಟವರ ಗಮನಕ್ಕೆ ತರುವ ಕಾರ್ಯ ಅಮರ ಸುದ್ದಿ ಮಾಡಲಿದೆ. ಗ್ರಾಮ ಹಾಗೂ ನಗರ ವ್ಯಾಪ್ತಿಗೆ ಸಂಬಂಧಿಸಿದ...
Loading posts...

All posts loaded

No more posts

error: Content is protected !!