- Thursday
- April 3rd, 2025

ಸುಳ್ಯ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಕೆ.ಅನುಷಾ ಪ್ರಭು ರವರು 600 ರಲ್ಲಿ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.ಇವರು ಸುಳ್ಯದ ಉದ್ಯಮಿ ಪ್ರಗತಿಪರ ಕೃಷಿಕ ಅಶೋಕ ಪ್ರಭು ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪ್ರಭು ದಂಪತಿಯ ಪುತ್ರಿ.

ಅರಂತೋಡು :ಅಡ್ಯಡ್ಕ ಪೆತ್ತಾಜೆ ಯಲ್ಲಿ ರಸ್ತೆಗೆ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಪೆತ್ತಾಜೆಯಿಂದ ವರದಿಯಾಗಿದೆ.ಮರವನ್ನು ತೆರವು ಗೊಳಿಸುವ ಕಾರ್ಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ವೇಣು,ತೊಡಿಕಾನ ದೇವಸ್ಥಾನ ಮ್ಯಾನೇಜರ್ ಆನಂದ ಕಲ್ಲಗದ್ದೆ,ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಗುರು ನಾರ್ಕೋಡು ಸೇರಿದಂತೆ ಕಲ್ಲಗದ್ದೆ ಜನರು ಸಹಕರಿಸಿ ತೆರವು ಗೊಳಿಸಲಾಯಿತು.