- Thursday
- November 21st, 2024
ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೃದ್ಧಿ ಹೆಚ್ ರೈ 600 ರಲ್ಲಿ 600 ಅಂಕ ಪಡೆದು ಸುಳ್ಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾಳೆ. ಇವರು ಉಬರಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಹರೀಶ್ ರೈ ಉಬರಡ್ಕ ಮತ್ತು ರಾಜೀವಿ ಹೆಚ್ ರೈ ದಂಪತಿಗಳ ಪುತ್ರಿ.
ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬ ವನ್ನು ಕೋವಿಡ್ 2ನೇ ಅಲೆಯಿಂದಾಗಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಅರಂತೋಡು ಜುಮ್ಮಾ ಮಸೀದಿ ಖತೀಬ್ ಆಲ್ ಹಾಜ್ ಇಸ್ಹಾಕ್ ಬಾಖವಿ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು. ಮರಣ ಹೊಂದಿದವರಿಗೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಜಮಾತ್ ಪದಾಧಿಕಾರಿಗಳು, ಎಸೋಸಿಯೇಶನ್ ಪದಾಧಿಕಾರಿಗಳು,ಎಸ್ ಕೆ ಎಸ್ ಎಸ್...
ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 25 ಮಂದಿ ಡಿಸ್ಟಿಂಕ್ಷನ್, 24 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕೃತಿಕಾ.ವೈ.ಸಿ 600ರಲ್ಲಿ 600 ಪೂರ್ಣ ಅಂಕಗಳು, ಮಹಮ್ಮದ್ ಮುಯೀಫ್ 599 ಹಾಗೂ ಯಶವಂತ್.ವೈ.ಪಿ 596 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಡಿಸ್ಟಿಂಕ್ಷನ್,...
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಇಂದು ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿ ಮಾತನಾಡಿದರು. ಪತ್ರಿಕೆಗಳಲ್ಲಿ ಬರುವ ವರದಿಗಳಲ್ಲಿ ಸತ್ಯಾಸತ್ಯತೆ,ನಿಖರತೆ ಜತೆಗೆ ಸಂಪೂರ್ಣತೆ ಇದ್ದರೆ ಮಾತ್ರ ಉತ್ರಮ ವರದಿಯಾಗಬಲ್ಲುದು....
ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 2021-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ಕೂರಿನಲ್ಲಿ ಜು.20 ರಂದು ನಡೆಯಿತು. ಗೌರವಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷರಾಗಿ ಜಯಂತ ಕುಂಡಡ್ಕ, ಕಾರ್ಯದರ್ಶಿಯಾಗಿ ಶಶಿಕುಮಾರ್ ಬಿ.ಎನ್., ಕೋಶಾಧಿಕಾರಿಯಾಗಿ ಜೀವನ್ ಕೊಂಡೆಪ್ಪಾಡಿ ಆಯ್ಕೆಯಾದರು. ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,...