Ad Widget

ಕರಂಗಲ್ಲು :- ಬರೆ ಕುಸಿತ

ದೇವಚಳ್ಳ ಗ್ರಾಮದ ಸುಬ್ರಹ್ಮಣ್ಯ ಕರಂಗಲ್ಲು ಎಂಬುವವರ ಮನೆಯ ಹಿಂಬದಿಯ ಬರೆ ಜು.17ರ ರಾತ್ರಿ ಕುಸಿದಿದ್ದು, ಜು.18 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರು, ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಸ್ಥಳಿಯರು ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಸಹಕರಿಸಿದರು. ✍ವರದಿ :- ಉಲ್ಲಾಸ್ ಕಜ್ಜೋಡಿ

ಕೊಲ್ಲಮೊಗ್ರ :- ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

ಕೊಲ್ಲಮೊಗ್ರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನಗಳು ಹೋಗಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜು.17 ರಂದು ಶ್ರಮದಾನದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಗೂ ಕಲ್ಲುಗಳನ್ನು ಹಾಕಿ ರಸ್ತೆಯನ್ನು ಸರಿಪಡಿಸಿದರು.ಈ ಸಂದರ್ಭದಲ್ಲಿ...
Ad Widget

ಮಲ್ಲಾರ : ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವು

ಹರಿಹರ ಪಲ್ಲತ್ತಡ್ಕ ಗ್ರಾಮದ ಮಲ್ಲಾರ ಎಂಬಲ್ಲಿ ಜು.18 ರಂದು ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಕೆಲ ಗಂಟೆಗಳ ಸಮಯ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ನಂತರ ಸಾರ್ವಜನಿಕರು ಹಾಗೂ ಸ್ಥಳಿಯರ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು. ✍ವರದಿ :- ಉಲ್ಲಾಸ್ ಕಜ್ಜೋಡಿ

ಸೇವಾ ಭಾರತಿ ವತಿಯಿಂದ ಸರಕಾರಿ ಆಸ್ಪತ್ರೆಯ ಆವರಣ ಸ್ವಚ್ಚತೆ

ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸೇವಾ ಭಾರತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಸುಮಾರು 25 ಜನ ಕಾರ್ಯಕರ್ತರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕಾಡು ಕಡಿಯುವುದು, ಕಸ ಹೆಕ್ಕುವುದು, ಬ್ಲೀಚಿಂಗ್ ಹಾಗೂ ಇತರ ಎಲ್ಲಾ ರೀತಿಯ ಕೆಲಸಗಳ ಮೂಲಕ ಪೂರ್ಣ ಪ್ರಮಾಣದ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಟ್ಟರು.ಸೇವಾ ಭಾರತಿ ಪ್ರಮುಖರಾದ...

ಐನೆಕಿದು : ನಿಸರ್ಗ ಯುವಕ ಮಂಡಲದಿಂದ ಶ್ರಮದಾನ

ಐನೆಕಿದು ನಿಸರ್ಗ ವೃತ್ತದಿಂದ ನವಗ್ರಾಮದವರೆಗೆ ರಸ್ತೆ ಬದಿಯಲ್ಲಿರುವ ಕಾಡನ್ನು ಕಡಿದು ಸ್ವಚ್ಛಗೊಳಿಸುವ ಮೂಲಕ ಜೂ.18 ರಂದು ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ನಿಸರ್ಗ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ✍ವರದಿ :- ಉಲ್ಲಾಸ್ ಕಜ್ಜೋಡಿ

ಕೊಡಗು ಸಂಪಾಜೆ ಶಾಲೆಯಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ

ಕೊಡಗು ಸಂಪಾಜೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜು. 17 ರಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಭರತ್, ಸದಸ್ಯರುಗಳಾದ ಕುಮಾರ್ ಚೆದ್ಕಾರ್, ಶ್ರೀಮತಿ...

ಸುಬ್ರಹ್ಮಣ್ಯ : ಮಕ್ಕಳ ಆರೋಗ್ಯ ತಪಾಸಣೆ, ಪ್ರೋಟೀನ್‌ ಪೌಡರ್ ವಿತರಣೆ

ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಅಭಯ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಾ.ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಪ್ರೋಟೀನ್ ವಿತರಣಾ ಕಾರ್ಯಕ್ರಮವನ್ನು ಅಭಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ...
error: Content is protected !!