
ಸುಳ್ಯದ ಕುರುಂಜಿಭಾಗ್ ನಲ್ಲಿ ಉತ್ಸವ ಕಂಪೆನಿಯ ಸಂಭ್ರಮ ಪೈಂಟ್ ಉತ್ಪಾದನಾ ಘಟಕ ಜುಲೈ 15 ರಂದು ಶುಭಾರಂಭಗೊಂಡಿತು. ಸ್ವಾಗತ್ ಐಸ್ ಕ್ರೀಂನ ಪ್ರಮೋದ್ ಮಾಲಕತ್ವದ ನೂತನ ಪೈಂಟ್ ಉತ್ಪಾದನಾ ಘಟಕದ ಶುಭಾರಂಭ ಇಂದು ನಡೆಯಿತು. ಸಂಸ್ಥೆಯ ಮಾಲಕ ಕೆ.ಪ್ರಮೋದ್, ಸ್ವಾಗತ್ ಐಸ್ ಕ್ರೀಂ ಸಂಸ್ಥೆಯ ಮಾಲಕ ಪ್ರಭಾಕರನ್ ನಾಯರ್ ಮತ್ತಿತರರು ಉಪಸ್ಥಿತರಿದ್ದರು.