- Thursday
- April 3rd, 2025

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆಯು ಜು.15 ರಂದು ನಡೆಯಿತು. ಅರ್ಚಕ ವೆಂಕಟ್ರಾಮ್ ಭಟ್ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ, ಮಿತ್ತೂರು ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಕಟ್ಟಡ ಸಲಹಾ ಸಮಿತಿ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು,...

ಜೂನ್ 15ರಂದು ಸುರಿದ ಭಾರಿ ಮಳೆಗೆ ಮರ್ಕಂಜ ಗ್ರಾಮದ ಜನಾರ್ಧನ ನಾಯ್ಕರವರು ನಿರ್ಮಿಸುತ್ತಿರುವ ನೂತನ ಮನೆಯ ಹಿಂಬದಿಯ ಬರೆ ಕುಸಿದಿದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಓಮನಎನ್.ಕೆ. ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ. ಸುಬ್ರಹ್ಮಣ್ಯಕ್ಕೆ ಪುತ್ತೂರು ನಗರ ಠಾಣೆ ಎಸ್.ಐ. ಜಂಬೂರಾಜ್ ಮಹಾಜನ್ ಬರಲಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಮಡಪ್ಪಾಡಿ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರ ಲಾಭಾಂಶ ವಿತರಣಾ ಕಾರ್ಯಕ್ರಮವು ಹಣ ಸಂಗ್ರಹಣ ಕೇಂದ್ರ ಮಡಪ್ಪಾಡಿ ದಲ್ಲಿ ನಡೆಯಿತು .ಒಟ್ಟು ಒಕ್ಕೂಟದಲ್ಲಿ 43 ಸಂಘಗಳಿಗೆ ಲಾಭಾಂಶ ವಿತರಣೆ ನಡೆದಿದ್ದು ಸಾಂಕೇತಿಕವಾಗಿ ರತ್ನ ಶ್ರೀ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆಯ...