
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯದ ನೂತನ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರದ ಉದ್ಘಾಟನೆ ಜು.14 ರಂದು ಬಾಲಾಜಿ ಟ್ರೇಡರ್ಸ್ ಕಟ್ಟಡದಲ್ಲಿ ನೆರವೇರಿತು. ಕೇಂದ್ರ ಒಕ್ಕೂಟದ ಅಧ್ಯಕ್ಷ ಯತೀಶ್ ರೈ, ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲ, ಕಟ್ಟಡ ಮಾಲಕ ಕೃಷ್ಣಕುಮಾರ್ ಭಟ್, ವಲಯ ಅಧ್ಯಕ್ಷ ಭಾಸ್ಕರ್ ರಾವ್ ನೂತನ ಕಚೇರಿಯನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಲಯದ ಒಕ್ಕೂಟದ ಅಧ್ಯಕ್ಷರುಗಳು ನಿಕಟಪೂರ್ವ ಅಧ್ಯಕ್ಷರು ವಲಯದ ಮೇಲ್ವಿಚಾರಕರಾದ ನವೀನ್ ಬಿ ವಲಯದ ಸೇವಾ ಪ್ರತಿನಿಧಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.