
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ).ಸುಳ್ಯ ದೊಡ್ಡತೋಟ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ಚೊಕ್ಕಾಡಿ ಸೇವಾ ಕೇಂದ್ರದಲ್ಲಿ ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿ ಮನೆ ಹಾಗೂ ಒಕ್ಕೂಟದ ಅಧ್ಯಕ್ಷ ಪ್ರಸಾದ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಲಾಭಾಂಶ ಹಸ್ತಾಂತರ ಮಾಡಿದರು. ವಲಯದ ಮೇಲ್ವಿಚಾರಕರಾದ ನವೀನ್ ನಗದು ಸಹಾಯಕರಾದ ಪ್ರಶಾಂತ್ ಸೇವಾ ಪ್ರತಿನಿಧಿ ಶ್ರೀಮತಿ ಹರ್ಷಿತಾ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು.