- Saturday
- November 23rd, 2024
ಮರ್ಕಂಜ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಪವಿತ್ರ ಗುಂಡಿ ಹಾಗು ಉಪಾಧ್ಯಕ್ಷರಾಗಿ ಗೋವಿಂದ ಅಳವುಪಾರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ 9 ಸ್ಥಾನಗಳ ಪೈಕಿ ಬಿಜೆಪಿಯ 7, ಕಾಂಗ್ರೆಸ್ ನ 1 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ನೇತ್ರಾವತಿ ಕಲ್ಲಾಜೆ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಬಿಜೆಪಿ10, ಕಾಂಗ್ರೆಸ್ 3 ಸ್ಥಾನ ಪಡೆದಿತ್ತು.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಪೆರುವಾಜೆ ಯಲ್ಲಿ ಬಿಜೆಪಿಗೆ ಅಧಿಕಾರ ಲಭಿಸಿದೆ. ಅಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 8 ಸ್ಥಾನಗಳ ಪೈಕಿ ಕಾಂಗ್ರೆಸ್ 5 ಹಾಗೂ ಬಿಜೆಪಿ 3 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಧಿಕಾರ ನಡೆಸಲು ಬಹುಮತವಿದ್ದರೂ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಂತಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದ...
ಕಳಂಜ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್.ಕೆ ಹಾಗೂ ಉಪಾಧ್ಯಕ್ಷರಾಗಿ ಕೆ.ಗಣೇಶ್ ರೈ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಎಲ್ಲಾ 6 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು. ಚುನಾವಣಾಧಿಕಾರಿಯಾಗಿ ಶ್ರೀ ಸಣ್ಣೇಗೌಡ ಸ. ಕಾ. ಅ. ಲೋಕೋಪಯೋಗಿ ಇಲಾಖೆ ಸುಳ್ಯ ಇವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಕೊಲ್ಲಮೊಗ್ರ ಗ್ರಾ.ಪಂ. ನೂತನ ಅಧ್ಯಕ್ಷತೆಗೆ ಉದಯ ಕೊಪ್ಪಡ್ಕ, ಉಪಾಧ್ಯಕ್ಷತೆಗೆ ಜಯಶ್ರೀ ಚಾಂತಾಳ ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಎಲ್ಲಾ 8 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಉದಯ ಕೊಪ್ಪಡ್ಕ ರವರು ಪ್ರಸ್ತುತ ತಾ.ಪಂ. ಸದಸ್ಯರಾಗಿ ಕೂಡ ಜನಸೇವೆ ಮಾಡುತ್ತಿದ್ದಾರೆ.
ಕಲ್ಮಕಾರು ಗ್ರಾಮದ ಕಾಟೂರು ನಿವಾಸಿ, ಖ್ಯಾತ ನಾಟಿ ವೈದ್ಯೆ ನಾಗಮ್ಮ ಕಾಟೂರು ಅಲ್ಪಕಾಲದ ಅಸೌಖ್ಯದಿಂದ ಫೆ.15 ರಂದು ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಮೃತರು ನಾಲ್ಕು ಹೆಣ್ಣು ಹಾಗೂ ಮೂವರು ಗಂಡುಮಕ್ಕಳು, ಮೊಮ್ಮಕ್ಕಳು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅನಿಯಂತ್ರಿತವಾಗಿ ಏರುತ್ತಿರುವ ಬೆಲೆಯೇರಿಕೆಯ ವಿರುದ್ದ ಸುಳ್ಯದಲ್ಲಿ ಹೋರಾಟ ಸಂಘಟಿಸಲು ತಯಾರಿ ನಡೆಸಲಾಗುವುದು ಎಂದು ಸುಳ್ಯ ಸಿಐಟಿಯು ಅಧ್ಯಕ್ಷ ಕೆ.ಪಿ. ಜಾನಿ ತಿಳಿಸಿದ್ದಾರೆ.ಜನಸಾಮಾನ್ಯರಿಗೆ ಸಹಿಸಲಸಾಧ್ಯವಾದ ಮಟ್ಟದಲ್ಲಿ ದಿನನಿತ್ಯ ಏರುತ್ತಿರುವ ನಿತ್ಯೋಪಯೋಗಿ ವಸ್ತುಗಳಾದ ಆಹಾರ ಪದಾರ್ಥಗಳು, ಅಡುಗೆ ಅನಿಲ , ಡೀಸೆಲ್, ಪೆಟ್ರೋಲ್ , ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ಬಟ್ಟೆ ಬರೆಗಳು ರೈತರು ನೀರಾವರಿಗಾಗಿ ಬಳಸುವ ಪೈಪುಗಳು ,...
ನಿಂತಿಕಲ್ಲು ಕಾಪಡ್ಕ (ಪುಂಡೂರು) ನಿವಾಸಿ ಲಕ್ಷ್ಮೀಯವರು ಅಲ್ಪಕಾಲದ ಅನಾರೋಗ್ಯದಿಂದ ಫೆ. 15ರಂದು ರಾತ್ರಿ ನಿಧನರಾದರು.ಅವರಿಗೆ 78ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನಾರಾಯಣ ನಾಯ್ಕ, ಪುತ್ರಿಯರಾದ ಪಾರ್ವತಿ ಬಾಬು ನಾಯ್ಕ ಕುಳ್ಳಾಜೆ, ದೇವಕಿ ಸೋಮಪ್ಪ ನಾಯ್ಕ ಕೊಳಚಿಪ್ಪು, ಮೀನಾಕ್ಷಿ ಗೋವಿಂದ ನಾಯ್ಕ ಅಡೂರು, ಜಾನಕಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಃಪೂಜೆ, ಆರಾಟುಬಲಿ ನಂತರ ಅವಭೃಥ ಸ್ನಾನ ,ದರ್ಶನ ಬಲಿ ನಡೆಯಲಿದೆ. ಮಧ್ಯಾಹ್ನ 11.30 ಕ್ಕೆ ರಾಜಾಂಗಣ ಪ್ರಸಾದ, ಬಟ್ಟಲುಕಾಣಿಕೆ, ಧ್ವಜ ಅವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ ವಿತರಣೆ ನಡೆಯಲಿದೆ.ರಾತ್ರಿ 7.30 ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆದು,...
Loading posts...
All posts loaded
No more posts