Ad Widget

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಸತ್ಯನಾರಾಯಣ ಚಿಮ್ಟಿಕಲ್

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ ಇದರ ಸುಳ್ಯ ತಾಲೂಕು ಅಧ್ಯಕ್ಷರಾಗಿ ಅಜ್ಜಾವರ ಗ್ರಾಮ ಮುಳ್ಯ ಅಟ್ಲೂರಿನ ಸತ್ಯನಾರಾಯಣ ಚಿಮ್ಟಿಕಲ್ ಆಯ್ಕೆಯಾಗಿದ್ದಾರೆ.

ಗೋವಿನ ನೋವಿಗೆ ಮಿಡಿದ ಮನ – ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ಸ್ಥಳೀಯರು & ಮೆಸ್ಕಾಂ ಸಿಬ್ಬಂದಿಗಳು – ಗೋಶಾಲೆಗೆ ರವಾನೆ

ಕಾಲಿಗೆ ಗಾಯಗೊಂಡು ನಡೆದಾಡಲು ಕಷ್ಟವಾಗಿದ್ದ ಹೋರಿಯೊಂದಕ್ಕೆ ಮೆಸ್ಕಾಂ ಸಿಬ್ಬಂದಿಗಳು, ಸ್ಥಳೀಯರು ಚಿಕಿತ್ಸೆ ನೀಡಿ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ಗೋಶಾಲೆಗೆ ತಲುಪಿಸಿದ್ದಾರೆ. ಸುಳ್ಯದ ಮೆಸ್ಕಾಂ ಆವರಣದಲ್ಲಿ ಕಾಲಿನ ಪಾದದ ಭಾಗ ತುಂಡಾಗಿ ನಡೆದಾಡಲು ಸಂಕಟ ಪಡುತ್ತಿದ್ದ ಹೋರಿಗೆ ಮೆಸ್ಕಾಂ ನ ಕೆಲವು ಸಿಬ್ಬಂದಿಗಳು ಮತ್ತು ಸ್ಥಳೀಯ ನಾಗರಿಕರು ಸೇರಿ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿ,...
Ad Widget

ದೇವಚಳ್ಳ : ರೋಜ್ ಗಾರ್ ದಿನಾಚರಣೆ

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ರೋಜ್ ಗಾರ್ ದಿನಾಚರಣೆ ಮತ್ತು ಮಹಿಳಾ ಕಾಯಕೋತ್ಸವ ಸಮೀಕ್ಷೆದಾರರ ಪೂರ್ವಭಾವಿ ಸಭೆ ಫೆ. 6 ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶೈಲೇಶ್ ಅಂಬೆಕಲ್ಲು, ರಮೇಶ್ ಪಡ್ಪು, ದುರ್ಗದಾಸ್ ಮೆತ್ತಡ್ಕ, ರಾಜೇಶ್ವರಿ ಮಾವಿನಕಟ್ಟೆ, ಸೀತಮ್ಮ ಕರಂಗಲ್ಲು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಬಿ ಸ್ವಾಗತಿಸಿ,ವಂದಿಸಿದರು.

ಮುಳ್ಳುಬಾಗಿಲು ಮತ್ತು ಕರಂಗಲ್ಲು ಪರಿಸರದಲ್ಲಿ ಚಿರತೆ ಹಾವಳಿ- ಚಿರತೆ ಹಿಡಿಯಲು ಗ್ರಾಮಸ್ಥರ ಆಗ್ರಹ

ಕೊಲ್ಲಮೊಗ್ರ ಗ್ರಾಮದ ಮುಳ್ಳುಬಾಗಿಲು ಮತ್ತು ದೇವಚಳ್ಳ ಗ್ರಾಮದ ಕರಂಗಲ್ಲು ಆಸುಪಾಸಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ.ಫೆ.4 ರಂದು ರಾತ್ರಿ ವೆಂಕಟ್ರಮಣ ಮಾವಾಜಿ ಎಂಬುವವರ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಒಂದು ತಿಂಗಳ ಹಿಂದೆ ಆನಂದ ಮುಳ್ಳುಬಾಗಿಲು ಎಂಬುವವರ ಎರಡು ನಾಯಿ ಹಾಗೂ ಜಗದೀಶ್ ಕಿಲಾರ್ ಕಜೆ ಯವರ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂದು ತಿಳಿದುಬಂದಿದೆ. ಹಾಗಾಗಿ ಮುಳ್ಳುಬಾಗಿಲು ಹಾಗೂ...

ಬಾಳಿಲ : ತುಳು ಲಿಪಿಯ ನಾಮಫಲಕ ಅನಾವರಣ

ಬಾಳಿಲದಲ್ಲಿ ತುಳು ಲಿಪಿಯ ನಾಮಫಲಕ ಹಾಕುವ ಕಾರ್ಯಕ್ರಮ ಫೆ 06 ರಂದು ನಡೆಯಿತು. ನಾಮ ಫಲಕವನ್ನು ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ (ರಿ.) ಅಯ್ಯನಕಟ್ಟೆ ಇದರ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ ಅನಾವರಣಗೊಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಲುನಾಡ್ ಸಂಘಟನೆಯ ಉಪ ಸಂಘಟನಾ ಕಾರ್ಯದರ್ಶಿ ಜಗದೀಶ ಗೌಡ...

ಯುವಜನ ಸಂಯುಕ್ತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಮಂಡಳಿಯ ನಿರ್ದೇಶಕರು ಹಾಗೂ ಗೌರವ ಸಲಹೆಗಾರರಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು. ಮಂಡಳಿಯ ಅಧ್ಯಕ್ಷರಾದ ಶ್ರೀ ಅನಿಲ್ ಪೂಜಾರಿಮನೆ ಸಭಾಧ್ಯಕ್ಷತೆ ವಹಿಸಿದ್ದರು.ಯುವಜನ ಸಂಯುಕ್ತ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಹಮೀದ್ ಇಡ್ನೂರು ಮತ್ತು ಶ್ರೀ ದಿನೇಶ್ ಮಡಪ್ಪಾಡಿ ಅಭಿನಂದನಾ ಮಾತುಗಳನ್ನಾಡಿದರು.ಗ್ರಾಮ ಪಂಚಾಯತ್ ಚುನಾವಣೆಯಲ್ಲಿ...

ಕಳಂಜ ಗ್ರಾಮ ಪಂಚಾಯತಿನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ

ಕಳಂಜ ಗ್ರಾಮ ಪಂಚಾಯತ್ ನ 2020-21ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಪೋಷಣ ಅಭಿಯಾನ ಮಾಸಾಚರಣೆಯಡಿಯಲ್ಲಿ ಸುಪೋಷಣ್ ದಿನಾಚರಣೆಯು ಫೆ.5 ರಂದು ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಮುದಾಯ ಭವನ ಇಲ್ಲಿ ನಡೆಯಿತು. ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಕೋಟೆಮುಂಡುಗಾರು ಶಾಲಾ ವಿದ್ಯಾರ್ಥಿ ಕು. ಅಶ್ವಿನಿ ಎಂ ಹೆಚ್ ವಹಿಸಿದ್ದರು. ಸದ್ರಿ ಗ್ರಾಮ ಸಭೆಯಲ್ಲಿ ಮಹಿಳೆಯರು...

ತೊಡಿಕಾನ : ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯ ಇವರಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸ್ಯಗುಂಡಿಯ ಕಿಂಡಿ ಅಣೆಕಟ್ಟಿಗೆ ಮಣ್ಣು ತುಂಬುವ ಕಾರ್ಯವನ್ನು ಶ್ರಮ ಸೇವೆಯ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟರು.

ಪಂಜ : ದೇವರ ದರ್ಶನ ಬಲಿ – ಕಣ್ತುಂಬಿಕೊಂಡ ನೂರಾರು ಭಕ್ತರು – ಫೆ 6 ರಂದು ಬ್ರಹ್ಮರಥೋತ್ಸವ

ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯುತ್ತಿದೆ. ಇಂದು (ಫೆ.5) ರಂದು ಪೂರ್ವಾಹ್ನ ಶ್ರೀ ದೇವರ ಬಲಿಹೊರಟು ದರ್ಶನ ಬಲಿ, ಬಟ್ಟಲು ಕಾಣಿಕೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ದೇವಳದ ಮಾಜಿ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು,...

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ‘ನನ್ನ ಹಾಡು ನನ್ನದು’ ಸಂಗೀತ ಸ್ಪರ್ಧೆಯ ಫಲಿತಾಂಶ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಜಂಟಿಯಾಗಿ ನನ್ನ ಹಾಡು ನನ್ನದು ಸಂಗೀತ ಸ್ಪರ್ಧೆ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು . ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಂಗೀತ...
Loading posts...

All posts loaded

No more posts

error: Content is protected !!