

ಸುಳ್ಯ ಪನ್ನೆಬೀಡು ಭಗವತೀ ಕ್ಷೇತ್ರದಲ್ಲಿ ನೂತನ ಶಿಲಾಸ್ತಂಭ ಮತ್ತು ಶಾಶ್ವತ ಚಪ್ಪರ ಸಮರ್ಪಣೆ ಹಾಗೂ ಕಲಶೋತ್ಸವ ಮಾ.8, 9 ಹಾಗೂ 10 ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸದಸ್ಯ ಲಿಂಗಪ್ಪ ಗೌಡ ಕೇರ್ಪಳ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು.
ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಎ.ರಾಮಚಂದ್ರ, ಶಿವರಾಮ ಕೇರ್ಪಳ, ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ವಾಸುದೇವ ನಾಯಕ್,ಹರಪ್ರಸಾದ್ ತುದಿಯಡ್ಕ, ಪ್ರಕೃತಿ ಯುವ ಸಂಘದ ಅಧ್ಯಕ್ಷ ಉದಯ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.