ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಪುರಸ್ಕೃತ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಇದರ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯು ಫೆ.21ರಂದು ಸಹಕಾರಿಯ ಕೇಂದ್ರ ಕಛೇರಿ ಮಾತೃ ಧಾಮ ಗುರುಪುರ ಕೈಕಂಬದಲ್ಲಿ ಜರುಗಿತು. ಒಟ್ಟು 12 ಸ್ಥಾನದ ನಿರ್ದೇಶಕ ಮಂಡಳಿಗೆ 12 ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಸುಳ್ಯದಿಂದ ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜಿನ ಡಾ. ಮನೋಜ್ ಕುಮಾರ್ ಎ.ಡಿ. ನಿರ್ದೇಶಕರಾಗಿ ಆಯ್ಕೆಗೊಂಡರು. ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಶ್ರೀ ವೆಂಕಟೇಶ ನಾವಡ ಪೊಳಲಿ, ಪೂವಪ್ಪ ಕುಂದರ್ ಮೂಡಬಿದ್ರಿ, ಶ್ರೀಧರ ರಾವ್ ಕೈಕಂಬ, ಶ್ರೀಮತಿ ಪಾವನಾ ಜೆ. ಶೆಟ್ಟಿ ಮಂಗಳೂರು, ಶ್ರೀಮತಿ ವಿದ್ಯಾ ವಿ. ಕಾಮತ್ ಮೂಡಬಿದಿರೆ, ಪಿ. ಪದ್ಮನಾಭ ರಾವ್ ಮಳಲಿ, ಪ್ರಸಾದ್ ಕುಮಾರ್ ಮೂಡಬಿದಿರೆ, ಡಾ. ಮನೋಜ್ ಕುಮಾರ್ ಎ. ಡಿ ಸುಳ್ಯ, ಸಂದೀಪ್ ಕುಮಾರ್ ಶೆಟ್ಟಿ ಶಿರಿಯಾರ ಉಡುಪಿ, ಎಂ.ಕೆ. ಹರೀಶ್ ಮೂಡಬಿದಿರೆ ಇವರುಗಳು ಆಯ್ಕೆಯಾದರು. ಚುನಾಣಾಧಿಕಾರಿ ಶ್ರೀ ನವೀನ್ ಕುಮಾರ್ ಎಂ.ಎಸ್. ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ಕೊಂಪದವು ಉಪಸ್ಥಿತರಿದ್ದರು.
ಮಾತೃಭೂಮಿ ಸೌಹಾರ್ದ ಸಹಕಾರಿಯು ಸುಳ್ಯ , ಬೆಳ್ಳಾರೆಯನ್ನು ಒಳಗೊಂಡಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹತ್ತು ಶಾಖೆಗಳನ್ನು ಹೊಂದಿದೆ. ವಿವಿಧ ಉದ್ದೇಶದ ಸಹಕಾರಿ ಆರ್ಥಿಕ ವ್ಯವಹಾರ ಮಾತ್ರವಲ್ಲದೇ ಸುಸಜ್ಜಿತ ಸಭಾಂಗಣಗಳು, ಜನೌಷಧಿ ಮೆಡಿಕಲ್ಸ್ , ಜನರಲ್ ಮೆಡಿಕಲ್ಸ್, ಕೃಷಿ ಉತ್ಪನ್ನಗಳ ಕ್ಷೇತ್ರಗಳಿಗೂ ತನ್ನ ವ್ಯವಹಾರವನ್ನು ವಿಸ್ತರಿಸಿದೆ.