
ಪದವಿಪೂರ್ವ ಶಿಕ್ಷಣ ಇಲಾಖೆ, ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನ ಬಾಲಕರ ವಾಲಿಬಾಲ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಅಮಿರ್(ನಾಯಕ), ವಿನೋದ್, ಮಿಥುನ್, ಹಫಿಜ್, ವಿನ್ಯಾಸ್, ಸುಜನ್ ಸುಬ್ರಹ್ಮಣ್ಯ, ದೀಪಕ್, ಉದಯ್, ಲೇಖನ್, ದೀಕ್ಷಿತ್, ವಿನ್ಯಾಸ್ ಭಾಗವಹಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶಾಂತಿ ಅಳಿಕೆ, ಜಯರಾಮ ಪೆರಾಜೆ ಮಾರ್ಗದರ್ಶನ ನೀಡಿದ್ದಾರೆ.