ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ನೂತನ ಕಟ್ಟಡವನ್ನು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ
ಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಇಲಾಖಾ ಸಚಿವ ಎಸ್.ಅಂಗಾರ , ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಕಸ್ತೂರಿ ಪಂಜ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಯೋಜನಾ ನಿರ್ದೇಶಕ ಮಧುಕುಮಾರ್, ಜಿ.ಪ.ಇಂಜಿನಿಯರ್ ಹನುಮಂತ ರಾಯಪ್ಪ, ಮುಖ್ಯ ಕಾರ್ಯ ನಿರ್ಹಹಣಾಧಿಕಾರಿ ಎನ್. ಭವಾನಿಶಂಕರ, ಪುತ್ತೂರು ತಾ.ಪಂ.ಮುಖ್ಯ ಕಾರ್ಯ ನಿರ್ಹಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿ.ಪಂ.ಸದಸ್ಯರು ತಾ.ಪಂ.ಸದಸ್ಯರುಗಳು, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ
ಈ ಸಂದರ್ಭದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಮಾಜಿ ತಾ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ, ಶ್ರೀಮತಿ ಸುವರ್ಣಿನಿ, ಶ್ರೀಮತಿ ನೇತ್ರಾವತಿ ಬಿಳಿಮಲೆ, ಕಲಾವತಿ ದೊಡ್ಡೇರಿ, ಶಂಕರ ಪೆರಾಜೆ, ಪುಷ್ಪಾವತಿ ಬಾಳಿಲ, ಮುಳಿಯ ಕೇಶವ ಭಟ್, ಗುಣವತಿ ಕೊಲ್ಲಂತಡ್ಕ, ಜಯಪ್ರಕಾಶ್ ಕುಂಚಡ್ಕ, ಗುತ್ತಿಗೆದಾರ ವಸಂತಕುಮಾರ್ ಕುಂದಾಪುರ, ಜಿ.ಪಂ.ಯೋಜನಾ ನಿರ್ದೇಶಕ ಮಧುಕುಮಾರ್ ರನ್ನು ಸನ್ಮಾನಿಸಲಾಯಿತು.
ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ , ಬಾಳಿಲ ಪಿಡಿಓ ಚಂದ್ರಾವತಿ ವಂದಿಸಿದರು.