ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆ ಫೆ. 19 ರಂದು ಸುಬ್ರಮಣ್ಯದಲ್ಲಿ ನಡೆಯಿತು. ಸಭೆಯಲ್ಲಿ ಕೃಷಿಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಾದ ನುಸಿರೋಗ, ಅತಿವೃಷ್ಠಿ, ಹಳದಿ ರೋಗ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಹಳದಿ ರೋಗಕ್ಕೆ ಪರಿಹಾರ ನೀಡುವಂತೆ ಸರಕಾರದ ಗಮನ ಸೆಳೆಯಲು ಮತ್ತು ರೈತಪರ ಹೋರಾಟ ನಡೆಸಲು ಸಮಿತಿ ರಚಿಸಲಾಯಿತು. ಹಳದಿರೋಗ ಹೋರಾಟ ಸಮಿತಿ ಪ್ರಮುಖರಾಗಿ ಹಿರಿಯ ಹೋರಾಟಗಾರ ಉಮೇಶ್ ಕಜ್ಜೊಡಿಯವರನ್ನು ನೇಮಿಸಲಾಯಿತು. ಸಮಿತಿಯ ಸದಸ್ಯರಾಗಿ ಶಶಿಧರ.ಎ,ಜಯರಾಮ್ ಕಟ್ಟೆಮನೆ,ಭರತ್ ಕನ್ನಡ್ಕ, ವರದರಾಜ್ ಸಂಕೇಶ್ ಗೂನಡ್ಕ, ಸತೀಶ್ ಕಲ್ಮಕಾರ್, ಶೇಖರಪ್ಪ ತಳವಾರ್ ಕೊಲ್ಲಮೊಗ್ರ, ಚಂದ್ರಶೇಖರ ಕೊಂದಾಳ ಇವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಹೋರಾಟದ ರೂಪು-ರೇಷಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಜಿಲ್ಲಾಸಮಿತಿ ಸದಸ್ಯರಾದ ಜಯರಾಮ್ ಕಟ್ಟೆಮನೆ, ಉಮೇಶ್ ಕಜ್ಜೊಡಿ, ಶಶಿಧರ.ಎ, ರವೀಂದ್ರ ರುದ್ರಪಾದ ,ಜಯಪ್ರಕಾಶ್ ಕುಜೂಗೊಡು, ಸುಳ್ಯ ತಾಲೂಕು ಸಂಚಾಲಕ ಭಾನುಪ್ರಕಾಶ್ ಪೆರುಮುಂಡ, ಮಡಿಕೇರಿ ಸಂಚಾಲಕ ಪ್ರದೀಪ್ ಬನ್ನುರುಪಟ್ಟೆ ಕರಿಕೆ, ಪ್ರಕಾಶ್ ಕೆ, ಕಿರಣ್ ಪೈಲಾಜೆ ಉಪಸ್ಥಿತರಿದ್ದರು.
- Friday
- November 22nd, 2024