
ಸರಕಾರದ ಆದೇಶದಂತೆ ಎಲ್ಲೆಡೆ ದ್ವಿಚಕ್ರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ದಾಯ ವಾಗಿದ್ದು. ಹೆಲ್ಮೆಟ್ ಧರಿಸದೆ ಸಂಚಾರ ಮಾಡುವ ದ್ವಿಚಕ್ರ ಸವಾರರಿಗೆ ಪೊಲೀಸರ ದಂಡ ಒಂದೆಡೆಯಾದರೇ, ಹೆಲ್ಮೆಟ್ ಕಳ್ಳರಿಂದ ರಕ್ಷಿಸಿಕೊಳ್ಳುವುದು ತಲೆನೋವಾಗಿ ಪರಿಣಮಿಸಿದೆ.
ಸುಳ್ಯ ನಗರದ ರಥಬೀದಿಯಲ್ಲಿ ನಿಲ್ಲಿಸಿದ ಬೈಕ್ ನಲ್ಲಿದ್ದ ಹೆಲ್ಮೆಟ್ ಕಳ್ಳತನ ವಾಗಿತ್ತು. ಕಳ್ಳತನ ಮಾಡಿ ತೆಗೆದುಕೊಂಡು ಹೊಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಸುಳ್ಯ ಪತ್ರಕರ್ತರೊಬ್ಬರು ರಾತ್ರಿ 8 ಗಂಟೆ ಸಮಯದಲ್ಲಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೆಲ್ಮೆಟ್ ಅನ್ನು ಬೈಕ್ ನಲ್ಲೆ ಇರಿಸಿ ಅಂಗಡಿಗೆ ತೆರಳಿ ಬರುವ ಸಂದರ್ಭದಲ್ಲಿ ಬೈಕ್ ನಲ್ಲಿ ಇರಿಸಿದ ಹೆಲ್ಮೆಟ್ ಮಾಯವಾಗಿತ್ತು. ತಕ್ಷಣವೇ ಅಲ್ಲೆ ಇದ್ದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ಸಂದರ್ಭ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಇತ್ತೀಚೆಗೆ ಬಸ್ ನಿಲ್ದಾಣದ ಸಮೀಪ ಹಾಗೂ ಇನ್ನಿತರ ಕಡೆಗಳಲ್ಲಿ ಹಲವಾರು ಕಳ್ಳತನ ನಡೆದಿದ್ದು ಕಳ್ಳರನ್ನು ಪೋಲೀಸರು ಶೀಘ್ರ ಪತ್ತೆ ಹಚ್ಚಿ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.