
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಸುಳ್ಯ, ಇದರ ವತಿಯಿಂದ ಸಾಹಿತ್ಯಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ, ರಾಜ್ಯ ಮಟ್ಟದ ಜಾನ್ಸಿರಾಣಿ ಲಕ್ಷ್ಮೀಬಾಯಿ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರನ್ನು ಫೆ.19 ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷರಾದ ರಿಯಾಝ್ ಕಟ್ಟೆಕ್ಕಾರ್, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷರಾದ ಮುಸ್ತಾಫ. ಕೆ. ಎಂ. ಸುಳ್ಯದ ವಿವೇಕಾನಂದ ಸರ್ಕಲ್ ಬಳಿಯಲ್ಲಿ ಇರುವ ಸುಪ್ರೀತ್ ಮೋಂಟಡ್ಕ ರವರ ಮನೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಜ್ಜನ ಪ್ರತಿಷ್ಠಾನದ ಉಮ್ಮರ್ ಬೀಜದಕಟ್ಟೆ, ಚಲನಚಿತ್ರ ನಟ, ನಿರ್ದೇಶಕ ಶಿವಧ್ವಜ್, ನಗರ ಪಂಚಾಯತ್ ಸದಸ್ಯೆ ಶೀಲಾ ಕುರುಂಜಿ, ಅರುಣ್ ಕುರುಂಜಿ, ಸುಪ್ರೀತ್ ಮೋಂಟಡ್ಕ, ಶರೀಫ್ ಜಟ್ಟಿಪಳ್ಳ, ವರ್ಷಿತ್ ಪೂಜಾರಿ ಮನೆ, ಮೊದಲಾದವರು ಉಪಸ್ಥಿತರಿದ್ದರು.