ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ “ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ” ಎಂಬ ಯೋಜನೆಯಡಿ ಕೊಲ್ಲಮೊಗ್ರ ಗ್ರಾಮ ಪಂಚಾಯತಿ ಮಟ್ಟದ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಫೆಬ್ರವರಿ 20 ರಂದು ಮಯೂರ ಕಲಾಮಂದಿರದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮಾಧವ ಚಾಂತಾಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ. ಸದಸ್ಯ ಪುಷ್ಪರಾಜರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ವಿಜಯ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಯೋಜನೆಯ ಉದ್ದೇಶ ಮತ್ತು ಸೌಲಭ್ಯಗಳನ್ನು ಸವಿವರವಾಗಿ ತಿಳಿಸಿದರು.. ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾವತಿ ನಿರೂಪಿಸಿದರು. ನಳಿನಿ ಸ್ವಾಗತಿಸಿ,ನೇತ್ರಾವತಿ ವಂದಿಸಿದರು. ಮಕ್ಕಳ ತಾಯಂದಿರು, ಬಾಲ ವಿಕಾಸ ಸಮಿತಿಯವರು, ಸ್ತೀ ಶಕ್ತಿ ಸದಸ್ಯರು, ಹಿರಿಯ ನಾಗರಿಕರು ಹಾಜರಿದ್ದು ಆಗಮಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಅಂಗನವಾಡಿ ಸಹಾಯಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.
- Friday
- November 22nd, 2024