ಕನ್ನಡ ಸಾಹಿತ್ಯ ಪರಿಷತ್ ಮತ್ತು 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ನೇತೃತ್ವದಲ್ಲಿ ಹಿರಿಯ ಸಾಹಿತಿ ಡಾ.ಪೂವಪ್ಪ ಕಣಿಯೂರು ಅಧ್ಯಕ್ಷತೆಯಲ್ಲಿ ನೆಹರು ಸ್ಮಾರಕ ಮಹಾ ವಿದ್ಯಾಲಯದಲ್ಲಿ ಇಂದು ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕನ್ನಡ ಭುವನೇಶ್ವರಿ ಮೆರವಣಿಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಅಕ್ಷಯ್ ಕೆ.ಸಿ. ಚಾಲನೆ ನೀಡಿದರು. ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ| ಪೂವಪ್ಪ ಕಣಿಯೂರು, ಡಾ| ಕೆ.ವಿ.ಚಿದಾನಂದ, ಡಾ.ಹರಪ್ರಸಾದ್ ತುದಿಯಡ್ಕ, ಪ್ರದೀಪ್ ಕುಮಾರ್ ಕಲ್ಕೂರ, ಲಕ್ಷ್ಮೀಶ ತೋಳ್ಪಾಡಿ, ವಿನಯಕುಮಾರ್ ಕಂದಡ್ಕ, ಚನಿಯ ಕಲ್ತಡ್ಕ, ತಹಶೀಲ್ದಾರ್ ಅನಿತಾಲಕ್ಷ್ಮೀ, ಕೆ.ಟಿ.ವಿಶ್ವನಾಥ್, ಜಯಪ್ರಕಾಶ್ ರೈ, ಕ್ರಿಶಾ ಮರ್ಕಂಜ, ದೊಡ್ಡಣ್ಣ ಬರೆಮೇಲು, ಚಂದ್ರ ಕೋಲ್ಚಾರ್, ಚಂದ್ರಶೇಖರ ಪೇರಾಲು, ಎಂ.ಮೀನಾಕ್ಷಿ ಗೌಡ, ಡಾ.ಲೀಲಾಧರ್ ಕೆ.ವಿ., ಪಿ.ಬಿ.ಸುಧಾಕರ್ ರೈ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೊಸ ಕೃತಿಗಳ ಬಿಡುಗಡೆ ನಡೆಯಿತು. ನಿವೃತ್ತ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲರ ‘ಯುರೋಪಿನಲ್ಲಿ ಎಂಟು ವಾರ’ ಪ್ರವಾಸ ಕಥನ, ‘ನಮ್ಮೂರ ಜನಪದರು’ ಲಲಿತ ಪ್ರಬಂಧ, ‘ಬಂಡಾಯದ ಕತೆಗಳು’ ಕಥಾ ಸಂಕಲನ, ಶ್ರೀಮತಿ ವಿಮಲಾರುಣ ಪಡ್ಡಂಬೈಲುರವರ ಮಿಂಚು ಹುಳು ಕವನ ಸಂಕಲನ, ಸ್ಮಿತಾ ಅಮೃತರಾಜ್ ರ ಸಂಕಲನ ಪ್ರಬಂಧ ಒಂದು ವಿಳಾಸದ ಹಿಂದೆ, ಕವನ ಸಂಕಲನ ಮಾತು ಮೀಟಿ ಹೋಗುವ ಹೊತ್ತು, ಹೊತ್ತಗೆ ಹೊತ್ತು ಪುಸ್ತಕ ವಿಮರ್ಶೆ, ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕರ ಎಲೆಯ ಮರೆಯಲಿ ಕಥಾ ಮಾಲಿಕೆ, ಡಾ.ಪ್ರತಿಮಾ ಜಯರಾಂ ರ ಕೊಡಗು ಕೆನರಾ ಬಂಡಾಯ ಸಂಶೋಧನಾ ನಿಬಂಧ, ಹಾಗೂ ಯೋಗೇಶ್ವರಾನಂದ ಸ್ವಾಮೀಜಿ ಯವರ ಸತ್ಯದರ್ಶನ ಕೃತಿ ಸೇರಿದಂತೆ 10 ಕೃತಿಗಳು ಬಿಡುಗಡೆಗೊಂಡಿತು.