- Monday
- March 31st, 2025

ಆಂಜನಾದ್ರಿ ವಾದ್ಯಕಲಾ ತಂಡದ ಅಡ್ಕಾರು ಇದರ 2 ನೇ ತಂಡದ ರಂಗಪ್ರವೇಶ ಫೆ.18 ರಂದು ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುರುಗಳಾದ ಮನೀಶ್ ಇವರನ್ನು ಸನ್ಮಾನಿಸಲಾಯಿತು. https://youtu.be/u8_pRqhZ1rc

ಮಡಪ್ಪಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ, ಉಪಾಧ್ಯಕ್ಷರಾಗಿ ಉಷಾ ಜಯರಾಂ ಅವಿರೋಧವಾಗಿ ಆಯ್ಕೆಯಾದರು. ಇಲ್ಲಿ 5 ಸ್ಥಾನಗಳ ಪೈಕಿ ಕಾಂಗ್ರೆಸ್ 4 ಹಾಗೂ ಬಿಜೆಪಿ 1 ಸ್ಥಾನ ಪಡೆದಿತ್ತು.

ದೇವಚಳ್ಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿ ರಾಜೇಶ್ವರಿ ಮಣಿಕಂಠ ಮಾವಿನಕಟ್ಟೆ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ. ಮಹಿಳೆಗೆ ನಿಗದಿಯಾಗಿದ್ದು, ‘ಬಿ’ ಮಹಿಳೆ ಅಲ್ಲಿ ಇಲ್ಲದಿರುವುದರಿಂದ ‘ಎ’ ಮಹಿಳೆಯಿಂದ ನಾಮಪತ್ರ ಸ್ವೀಕರಿಸಬಹುದೆಂಬ ಬಗ್ಗೆ ಚುನಾವಣಾ ಆಯೋಗದಿಂದ ಲಿಖಿತ ಆದೇಶ ಬಾರದಿರುವ ಕಾರಣ ಅಧ್ಯಕ್ಷತೆಗೆ ಚುನಾವಣೆ ನಡೆಸದಿರಲು ಚುನಾವಣಾಧಿಕಾರಿ ನಿರ್ಧರಿಸಿದ್ದಾರೆ.ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸ್ವಾಭಿಮಾನಿ...