

ಚಂದನ ಸಾಹಿತ್ಯ ವೇದಿಕೆ, ಸುಳ್ಯ ಇದರ ದಶಮಾನೋತ್ಸವ ಆಚರಣೆ ಸಂಭ್ರಮ, ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಇದರ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕವಿ ಸಂಗಮ – ಕವಿ ಸಂಭ್ರಮ 2021, ರಾಜ್ಯ ಮಟ್ಟದ ಸದ್ಭಾವನಾ ಕವಿಗೋಷ್ಠಿ 2021 ವೇದಿಕೆ ಯಲ್ಲಿ 2021ನೇ ಸಾಲಿನ ರಾಜ್ಯ ಮಟ್ಟದ ಚಂದನ ಕಾವ್ಯಶ್ರೀ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಮನಗಂಡು ಸುಳ್ಯದ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕರಿಗೆ ಫೆ.14 ರಂದು ರಂದು ಸುಳ್ಯ ದ ಎಪಿಯಂಸಿ ಸಭಾಂಗಣದಲ್ಲಿ ಗಣ್ಯರ ಸಮಕ್ಷಮದಲ್ಲಿ ಚಂದನ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲೇಖಕಿ, ಕವಯಿತ್ರಿ, ಹವ್ಯಾಸಿ ಬರಹಗಾರ್ತಿಯಾಗಿರುವ ಇವರು ಪ್ರಸ್ತುತ ಸುಳ್ಯದ ಕೆ.ವಿ.ಜಿ ಆಯುರ್ವೇದ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಸುಳ್ಯದ ಸುಪ್ರೀತ್ ಮೋಂಟಡ್ಕ ರವರ ಪತ್ನಿ.