ಅನಿಯಂತ್ರಿತವಾಗಿ ಏರುತ್ತಿರುವ ಬೆಲೆಯೇರಿಕೆಯ ವಿರುದ್ದ ಸುಳ್ಯದಲ್ಲಿ ಹೋರಾಟ ಸಂಘಟಿಸಲು ತಯಾರಿ ನಡೆಸಲಾಗುವುದು ಎಂದು ಸುಳ್ಯ ಸಿಐಟಿಯು ಅಧ್ಯಕ್ಷ ಕೆ.ಪಿ. ಜಾನಿ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಸಹಿಸಲಸಾಧ್ಯವಾದ ಮಟ್ಟದಲ್ಲಿ ದಿನನಿತ್ಯ ಏರುತ್ತಿರುವ ನಿತ್ಯೋಪಯೋಗಿ ವಸ್ತುಗಳಾದ ಆಹಾರ ಪದಾರ್ಥಗಳು, ಅಡುಗೆ ಅನಿಲ , ಡೀಸೆಲ್, ಪೆಟ್ರೋಲ್ , ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ಬಟ್ಟೆ ಬರೆಗಳು ರೈತರು ನೀರಾವರಿಗಾಗಿ ಬಳಸುವ ಪೈಪುಗಳು , ಔಷಧಿಗಳು , ಚಿಕಿತ್ಸಾ ವೆಚ್ಚಗಳು , ವಾಹನಗಳ ಇನ್ಷ್ಯೂರೆನ್ಸ್ ಪಾಲಿಸಿಯ ಮೊತ್ತ ಟೋಲ್ ಫೀಸ್ , ಮತ್ತು ಜನಸಾಮಾನ್ಯರು ಬಳಸುವ ಎಲ್ಲಾ ರೀತಿಯ ವಸ್ತುಗಳ ಬೆಲೆಯೇರಿಕೆಯಿಂದ ಜನರ ಆದಾಯ ಕಡಿಮೆಯೂ ಖರ್ಚು ಹೆಚ್ಚಾಗಿ ಬದುಕುವುದೇ ಕಷ್ಟ ಅನ್ನುವ ರೀತಿ ನಿರ್ಮಾಣ ಆಗಿದೆ. ಜನರ ವಿರೋಧದ ಧ್ವನಿಯನ್ನು ಆಡಳಿತಕ್ಕೆ ಮುಟ್ಟಿಸುವ ಸಲುವಾಗಿ ಸದ್ಯದಲ್ಲೇ ಸರ್ವರನ್ನೂ ಒಗ್ಗೂಡಿಸಿ ಜನಪರರಾದ ಹೋರಾಟ ಸಂಘಟಿಸುವ ನಿಟ್ಟಿನಲ್ಲಿ ತಯಾರಿಗಳು ಆಗುತ್ತಿದ್ದು, ತಾಲೂಕಿನ ಜನತೆಯ ಬೆಂಬಲವನ್ನು ಇದಕ್ಕಾಗಿ ಕೋರುತ್ತಿದ್ದೇವೆ ಎಂದು ಸಿಐಟಿಯು ಅಧ್ಯಕ್ಷ ಕೆ.ಪಿ. ಜಾನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024