Ad Widget

ಗುರಿ

ಸಮಯವು ನಿಲ್ಲದು ಎಂದಿಗೂ ನಿನಗೆ…
ಸಾಗುತಲಿರು ನೀ ಗುರಿಯೆಡೆಗೆ
ಮನಸಲಿ ನೋವಿನ ಬದಲು ಛಲವನು ತುಂಬಿಸು
ನೀ ನಿನ್ ಎದೆಯೊಳಗೆ…

. . . . . . . . .

ಕನಸಿನ ಗೋಪುರ ಕಟ್ಟುತ ಕೂರದಿರು
ನನಸಾಗಿಸುವ ಪ್ರಯತ್ನಪಡು…
ಸ್ವಾರ್ಥರಹಿತ ಮನದಲಿ ಸಾಗು ನೀ
ತಲುಪಿಯೆ ತಲುಪುವೆ ಗುರಿಯನ್ನು…

. . . . . . .

ಯಾರಿಗೂ ಅಂಜದೆ, ಯಾರಿಗೂ ಅಳುಕದೆ
ಸಾಗುತಲಿರು ನೀ ಗುರಿಯೆಡೆಗೆ…
ಇಲ್ಲಿ ಯಾರಿಗೆ ಯಾರೂ ಆಗರು
ನೀನೇ ಎಲ್ಲವೂ ನಿನಗಿಲ್ಲಿ…

ಸೋಲನು ಸೋಲಿಸಿ, ಗೆಲುವನು ಚುಂಬಿಸಿ
ತಲುಪು ನೀ ನಿನ್ನ ಗುರಿಯನ್ನು…
ಸಮಯವು ಎಂದಿಗೂ ನಿಲ್ಲದು ನಿನಗೆ
ಸಾಗುತಲಿರು ನೀ ಗುರಿಯೆಡೆಗೆ…

✍ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading