ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಮ್ಮ ಊರು ನಮ್ಮ ಕೆರೆ ಪೂರ್ವಭಾವಿ ಸಭೆಯು ಫೆ.12 ರಂದು ಮಯೂರ ಕಲಾಮಂದಿರ ಕೊಲ್ಲಮೊಗ್ರ ಇಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ದೇಶ ಸಾರ್ವಜನಿಕ ಉಪಯೋಗಕ್ಕಾಗಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಮತ್ತು ಸುತ್ತ ಮರ-ಗಿಡಗಳನ್ನು ಬೆಳೆಸುವ ಮೂಲಕ ಕೆರೆಗಳನ್ನು ಉಳಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಕೆರೆ ರಚನೆ ಸಮಿತಿಯನ್ನು ರಚಿಸಲಾಯಿತು. ಈ ಕೆರೆ ರಚನೆ ಸಮಿತಿಯ ಅಧ್ಯಕ್ಷರಾಗಿ ಮಾಧವ ಚಾಂತಾಳ, ಉಪಾಧ್ಯಕ್ಷರಾಗಿ ಕಮಲಾಕ್ಷ ಮುಳ್ಳುಬಾಗಿಲು, ಕಾರ್ಯದರ್ಶಿ ಸಂತೋಷ್ ಕುಮಾರ್ ರೈ(ಯೋಜನಾಧಿಕಾರಿಗಳು), ಜೊತೆ ಕಾರ್ಯದರ್ಶಿ ಶಿವರಾಮ ಚಾಂತಾಳ, ಕೋಶಾಧಿಕಾರಿ ಭರತ್ ಕೊರಂಬಡ್ಕ, ಸದಸ್ಯರುಗಳು ಅಬ್ದುಲ್ ಕುಂಞ, ಸುಧಾಮಣಿ, ಹೂವಯ್ಯ ಸುಬ್ರಹ್ಮಣ್ಯ, ಮೋಹನ ಅಂಬೆಕಲ್ಲು, ಉದಯ, ತಾರನಾಥ ಆಯ್ಕೆಯಾದರು.
ಈ ನಮ್ಮೂರು ನಮ್ಮ ಕೆರೆ ಅಭಿಯಾನವನ್ನು ಸಂಘ-ಸಂಸ್ಥೆಗಳು, ಮಯೂರ ಗೆಳೆಯರ ಬಳಗ ಮಲ್ಲಾಜೆ, ಹಾಗೂ ಗ್ರಾಮಪಂಚಾಯತ್ ಕೊಲ್ಲಮೊಗ್ರ ದ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಮಾಡಲು ನಿರ್ಣಯಿಸಲಾಗಿದೆ.
ಈ ಸಂದರ್ಭದಲ್ಲಿ ಯೋಜನೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಕಲ್ಮಕಾರು ಒಕ್ಕೂಟದ ಅದ್ಯಕ್ಷರಾದ ಪುಷ್ಪರಾಜ್ ಪಡ್ಪು, ಕೊಲ್ಲಮೊಗ್ರ ಒಕ್ಕೂಟದ ಅದ್ಯಕ್ಷರಾದ ಜನಾರ್ಧನ, ಯಶೋಧ, ಮೋಹಿನಿ ಹಾಗೂ ವಲಯ ಮೇಲ್ವಿಚಾರಕರಾದ ಸೀತಾರಾಮ್, ಸೇವಾ ಪ್ರತಿನಿಧಿ ಸಾವಿತ್ರಿ, ಶೋಭಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ವಿಪತ್ತು ನಿರ್ವಹಣ ಸದಸ್ಯರುಗಳು ಮತ್ತು ಊರಿನ ಮುಖಂಡರುಗಳು ಉಪಸ್ಥಿತರಿದ್ದರು.
✍ವರದಿ:- ಉಲ್ಲಾಸ್ ಕಜ್ಜೋಡಿ