2021 ಪೆಬ್ರವರಿ 07 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸದಸ್ಯರಿಂದ ಶ್ರಮದಾನ ಫೆ. 7 ರಂದು ನಡೆಯಿತು. ಘಟಕದ ಸಂಯೋಜಕರಾದ ಸತೀಶ್ ಟಿ.ಎನ್. ಹಾಗೂ ಮಣಿಕಂಠ ಕಟ್ಟ ಇವರ ನೇತೃತ್ವದಲ್ಲಿ ಗಡಿಕಲ್ಲು ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ದ್ವಾರವನ್ನು ಶ್ರಮಸೇವೆಯ ಮುಖಾಂತರ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕರಾದ ಸೀತಾರಾಮ ಹಾಗೂ ಕೊಲ್ಲಮೊಗ್ರ ಸೇವಾ ಪ್ರತಿನಿಧಿ ಸಾವಿತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅದೇ ದಿನ ಬಾಳುಗೋಡು ಗ್ರಾಮದ ಉಪ್ಪುಕಳ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪವಿರುವ ದೇವರ ಮೀನುಗಳು ನೀರಿನ ಅಭಾವದಿಂದ ಸಂಕಷ್ಟದಲ್ಲಿರುವುದನ್ನು ಹೊಳೆಗೆ ಮರಳಿನ ಚೀಲ ಇರಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ದೇವರ ಮೀನುಗಳಿರುವ ಗುಂಡಿಯ ನೀರಿನ ಮಟ್ಟವನ್ನು ಹೆಚ್ಚಿಸಲಾಯಿತು. ಈ ಸಂದರ್ಭದಲ್ಲಿ ಬಾಳುಗೋಡು ಸೇವಾ ಪ್ರತಿನಿಧಿ ನಾಗವೇಣಿ ಮತ್ತು ಸ್ಥಳೀಯರಾದ ಉದಯ ಹಾಗೂ ಓಬಯ್ಯ ಉಪಹಾರದ ವ್ಯವಸ್ಥೆ ಮಾಡಿ ಸಹಕರಿಸಿದರು.
(ವರದಿ- ಉಲ್ಲಾಸ್ ಕಜ್ಜೋಡಿ)
- Monday
- November 25th, 2024