

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನಾ ಉಪವಿಭಾಗ ಮಡಿಕೇರಿ ವತಿಯಿಂದ ಚೆಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ವಿ.ಕೃಷ್ಣಪ್ಪ ನಡುಬೆಟ್ಟು, ಪೆರಾಜೆ ಗ್ರಾಮದ ಥೋಮಸ್ ಬಿಳಿಯಾರು, ಕೊಡಗು ಸಂಪಾಜೆಯಿಂದ ಇಸ್ಮಾಯಿಲ್ ಚಡಾವುರವರನ್ನು ಸೆಸ್ಕ್ ಎಇಇ ಮಹೇಶ್ ಮತ್ತು ಸಿಬ್ಬಂದಿವರ್ಗದವರು ಸಂಪಾಜೆ ವಿದ್ಯುತ್ ಕಚೇರಿಯಲ್ಲಿ ಸನ್ಮಾನಿಸಿದರು.
ಸಮಯಕ್ಕೆ ಮುಂಚಿತವಾಗಿಯೇ ಇವರು ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಈ ಸಂದರ್ಭದಲ್ಲಿ ಕೊಡಗು ಗ್ರಾ.ಪಂ. ಮಾಜಿ ಅಧ್ಯಕ್ಷ ಕುಮಾರ್ ಚೆದ್ಕಾರ್, ರಮಾನಂದ ಬಾಳೆಕಜೆ, ಸದಸ್ಯ ಪಿ.ಎಲ್. ಸುರೇಶ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.