
ಅಂಬೇಡ್ಕರ್ ರಕ್ಷಣಾ ವೇದಿಕೆಯ ನೆಟ್ಟಾರು ಘಟಕದ ಉದ್ಘಾಟನೆ ನಡೆಯಿತು. ನೂತನ ಘಟಕದ ಅಧ್ಯಕ್ಷರಾಗಿ ರಾಜೇಶ್ ಕಜೆ, ಉಪಾಧ್ಯಕ್ಷರಾಗಿ ರಮೇಶ್ ನೆಟ್ಟಾರು, ಕಾರ್ಯದರ್ಶಿಯಾಗಿ ವಸಂತ ಬೊಳಿಯಮೂಲೆ, ಜತೆ ಕಾರ್ಯದರ್ಶಿಯಾಗಿ ಗಂಗಾಧರ ನಾಯ್ಕ ನವಗ್ರಾಮ, ನೆಟ್ಟಾರು ಮಹಿಳಾ ಘಟಕದ ಅಧ್ಯಕ್ಷರಾಗಿ ಉಷಾ ಎಸ್. ನವಗ್ರಾಮ, ಮಹಿಳಾ ಕಾರ್ಯದರ್ಶಿಯಾಗಿ ಹರಿಣಾಕ್ಷಿ ನೆಟ್ಟಾರು ಆಯ್ಕೆಯಾದರು. ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಪರಮೇಶ್ವರ್ ಕೆಮ್ಮಿಂಜೆ, ಜಿಲ್ಲಾ ಕಾರ್ಯದರ್ಶಿ ವಿಜಯ ಪಾಟಾಜೆ, ಸುಳ್ಯ ತಾಲೂಕು ಅಧ್ಯಕ್ಷ ಮೋಹನ ಕುಮಾರ್ ಅಡ್ಕಬಳೆ, ಬೆಳ್ಳಾರೆ ಬೂಡು ಘಟಕದ ಅಧ್ಯಕ್ಷ ಗಣೇಶ್ ಪಾಟಾಜೆ, ತಾ.ಪಂ.ಸದಸ್ಯ ನಳಿನಾಕ್ಷಿ ಬೊಳಿಯಮೂಲೆ ಹಾಗೂ ಮಹೇಶ್ ಪುಡ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯ ಪಾಟಾಜೆ ಸ್ವಾಗತಿಸಿ, ವಂದಿಸಿದರು.